ಜನ ಸೇವೆ ಮಾಡುವವನೇ ಜನಪ್ರತಿನಿಧಿ….

0
112

ಮಂಡ್ಯ/ಮಳವಳ್ಳಿ: ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ಪ್ರತಿಯೊಬ್ಬ ಜನಪ್ರತಿನಿಧಿ ಸೇವೆ ಮಾಡಬೇಕು ಹೊರತು ದರ್ಪ ಹಾಗೂ ದಬ್ಬಾಳಿಕೆ ಯಿಂದ ನಡೆಯಬಾರದು ಎಂದು ಕೆ.ಪಿಸಿ.ಸಿ ಪ್ರದಾನ ಕಾರ್ಯದರ್ಶಿ ಹಾಗೂ ಲೋಹಿಯಾ ವಿಚಾರ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಬಿ.ಎಸ್ ಶಿವಣ್ಣ ತಿಳಿಸಿದರು.
ಮಳವಳ್ಳಿ ತಾಲ್ಲೂಕಿನ ಕುಂದೂರುಬೆಟ್ಟದ ರಷಸಿದ್ದೇಶ್ವರ ಮಠದಲ್ಲಿ ಕೆರೆ ಭಾಗಿನ ಹಾಗೂ ಅಭಿನಂದನಾ ಸಮಾರಂಭದಲ್ಲಿ ಅಭಿನಂದನಾ ಸ್ವೀಕರಿಸಿ ಮಾತನಾಡಿದ ಅವರು ಜನರನ್ನು ತಮ್ಮ ಹತೋಟಿಯಲ್ಲಿಟ್ಟು ಅಧಿಕಾರ ವನ್ನು ನಡೆಸಬೇಕು ಎನ್ನುವುದು ಸರಿಯಲ್ಲ . ನಾನು ಮುಂದಿನ ದಿನಗಳಲ್ಲಿ ವಿಧಾನಪರಿಷತ್ ಸದಸ್ಯ ರಾಗಿ ಮಂತ್ರಿ ಯಾದರೆ ಈ ಕ್ಷೇತ್ರವನ್ನು ದತ್ತು ತೆಗೆದುಕೊಂಡು ಕ್ಷೇತ್ರವನ್ನು ಅಭಿವೃದ್ಧಿ ಪಡಿಸುವುದಾಗಿ ತಿಳಿಸಿದರು. ಈ ಭಾಗದಲ್ಲಿ ಸಾಕಷ್ಟು ಕಡುಬಡವರಿದ್ದು ಅದಕ್ಕಾಗಿ ಈ ಭಾಗಕ್ಕೆ 1200 ಕೋಟಿ ಯೋಜನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ್ದಾರೆ. ಅಂದು ಬಸವಣ್ಣ ಅನ್ನದಾಸೋಹ ನಡೆಸಿದ್ದರು ಆದರೆ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅನ್ನಭಾಗ್ಯ ನೀಡುವ ಮೂಲಕ ಬರದ ನಡುವೆಯೂ ಹಸಿದವರಿಗೆ ಅನ್ನ ನೀಡಿ ಉತ್ತಮ ಆಡಳಿತ ನಡೆಸಿದವರು ಮುಂದಿನ ಬಾರಿಯೂ ಮುಖ್ಯಮಂತ್ರಿ ಯಾಗಲಿ ಎಂದರು ಕಾರ್ಯ ಕ್ರಮ ದಲ್ಲಿ ರಷಸಿದ್ದೇಶ್ವರ ಮಠದ ನಂಜುಂಡ ಸ್ವಾಮಿ. ಗುರುಸ್ವಾಮಿ. ಗುರುಪ್ರಸಾದ,. ಚಂದ್ರಹಾಸ್. ಶಿವರಾಜು ಸೇರಿದಂತೆ ಮತ್ತಿತ್ತರರು ಇದ್ದರು.

LEAVE A REPLY

Please enter your comment!
Please enter your name here