ಜಲಾಶಯದ ಹೂಳೆತ್ತಲು ಕರವೇ ಹೋರಾಟ

0
430

ಬಳ್ಳಾರಿ/ಹೊಸಪೇಟೆ: ಬಳ್ಳಾರಿ, ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಗಳ ರೈತರ ಜೀವನಾಡಿ ತುಂಗಭದ್ರಾ ಜಲಾಶಯದ ಹೂಳು ಎತ್ತುವ ಕುರಿತು ಹೋರಾಟ ರೂಪಿಸಲು, ಕರವೇ ಜಿಲ್ಲಾ ಹಾಗೂ ತಾಲ್ಲೂಕು ಘಟಕದ ಪದಾಧಿಕಾರಿಗಳು, ಸ್ಥಳೀಯ ಅಮರಾವತಿ ಪ್ರವಾಸಿ ಮಂದಿರದಲ್ಲಿ ಭಾನುವಾರ ಸಭೆ ನಡೆಸಿದರು.
ತಾಲೂಕು ಅಧ್ಯಕ್ಷ ಟಿ.ಹನುಮಂತಪ್ಪ ಸಭೆಯಲ್ಲಿ ಮಾತನಾಡಿ, ಜಲಾಶಯದಲ್ಲಿ 30 ಟಿಎಂಸಿಯಷ್ಟು ಸಂಗ್ರಹವಿದ್ದು, 100 ಟಿಎಂಸಿಗೆ ಇಳಿಕೆಯಾಗಿದೆ. 133 ಟಿಎಂಸಿ ನೀರು ಸಂಗ್ರಹವುಳ್ಳ ಜಲಾಶಯದಲ್ಲಿ ಪ್ರತಿವರ್ಷ 5ಟಿಎಂಸಿ ಹೂಳು ಸಂಗ್ರಹವಾಗುತ್ತಿದೆ. ವರ್ಷದಿಂದ ವರ್ಷಕ್ಕೆ ಜಲಾಶಯದಲ್ಲಿ ನೀರಿನ ಸಂಗ್ರಹ ಸಾಮಾರ್ಥ್ಯ ಕುಸಿಯುತ್ತಿದೆ.

ಇದರ ಪರಿಣಾಮವಾಗಿ ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ಕೃಷಿ ಭೂಮಿಗಳಿಗೆ ಸಮರ್ಪಕವಾಗಿ ನೀರು ಸಿಗದಂತಾಗಿದೆ. ರೈತಾಪಿವರ್ಗ ಪ್ರತಿವರ್ಷವೂ ಸಂಕಷ್ಠಗೀಡಾಗಿದ್ದಾರೆ. ಜಲಾಶಯದ ಹೂಳು ಎತ್ತುವ ಬಗ್ಗೆ ಈವರಗೆ ಯಾವುದೇ ಸರ್ಕಾರಗಳು ಗಂಭೀರ ಚಿಂತನೆ ನಡೆಸಿಲ್ಲ. ಬದಲಾಗಿ ಸುಳ್ಳು ಭರವಸೆಗಳನ್ನು ನೀಡಿ ರೈತರ ಹಾದಿಯನ್ನು ತಪ್ಪಿಸುವಂತ ಕಾರ್ಯವನ್ನು ಮಾಡಿವೆ ಎಂದು ಆರೋಪಿಸಿದರು.

ಸಮುದ್ರದ ನೆಂಟಸ್ತನ ಉಪ್ಪಿಗೆ ಬರ ಎನ್ನುವಂತಾಗಿದೆ. ಈ ಭಾಗದ ರೈತರ ಸ್ಥಿತಿ. ಜಲಾಶಯ ಪಕ್ಕದಲ್ಲಿಯೇ ಇದ್ದರೂ ನೀರಿಗಾಗಿ ರೈತರು, ಪರದಾಡುವಂತಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಿದ ಕರವೇ, ನೆರೆಯ ಆಂಧ್ರ, ತೆಲಂಗಾಣ, ಬಳ್ಳಾರಿ, ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಗಳ ರೈತರೆಲ್ಲರೂ ಒಗ್ಗೂಡಿಕೊಂಡು, ಹೋರಾಟ ತೀವ್ರ ಗೊಳಿಸಲಾಗುವುದು ಎಂದು ಎಚ್ಚರಿಸಿದರು.

ಪ್ರಧಾನ ಕಾರ್ಯದರ್ಶಿಎನ್.ಹೆಚ್.ಶ್ರೀನಿವಾಸ್ ತಾಲೂಕು ಸಂಘಟನಾ ಕಾರ್ಯದರ್ಶಿ ಎಮ್. ರಾಮಚಂದ್ರಪ್ಪ  ಕಾರ್ಯಕರ್ತರಾದ ಆರ್ಮುಗಮ್, ಬಿ.ಮಂಜುನಾಥ, ಗುಜ್ಜಲ ಹುಲುಗಪ್ಪ, ಎಸ್,ಎಮ್.ಜಾಫರ್, ಸಲೀಮ್, ಅಮರೇಶ್ವರಯ್ಯ, ವ್ಯಾಸರಾಜ್, ತಿಪ್ಪೇಸ್ವಾಮಿ ಕೆ.ಲಕ್ಷ್ಮೀದೇವಿ, ಸುರ್ವಣ ರತ್ನ, ಶಮ, ಶಕುಂತಲ, ಲತಾ, ಶೈಲಜ, ಸುಮಾ, ವಿಜಯರೇಡ್ಡಿ, ಲಲೀತಮ್ಮ ಇತರರು ಇದ್ದರು.

ತುಂಗಭದ್ರಾ ಜಲಾಶಯದ ಹೂಳು ಎತ್ತುವ ವಿಷಯ ಕುರಿತು ಆಂಧ್ರ ಮತ್ತು ತೆಲಂಗಾಣ ಮುಖ್ಯಮಂತ್ರಿಗಳ ಬಳಿ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲು ಮುಂದಿನ ದಿನಗಳಲ್ಲಿ ಕರವೇ ನೇತೃತ್ವದಲ್ಲಿ ಆಂಧ್ರ ಮತ್ತು ತೆಲಂಗಾಣಕ್ಕೆ ರೈತರ ನಿಯೋಗ ತೆರಳಿಲಿದೆ. ಬಳಿಕ ಮುಂದಿನ ಹೋರಾಟವನ್ನು ರೂಪಿಸಿ, ಸರ್ಕಾರದ ಮೇಲೆ ಒತ್ತಡ ಹಾಕಲಾಗುವುದು ಎಂದು ಕರವೇ ಬಳ್ಳಾರಿ ಜಿಲ್ಲಾಧ್ಯಕ್ಷ ಚಾನಾಳ್ ಶೇಖರ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here