ಜಲ ಮೂಲ ಸಂಶೋಧಿಸಿದ ಪೊಲೀಸ್ ಅಧಿಕಾರಿ

0
157

ಅಂಗೈಯಲ್ಲಿ ತೆಂಗಿನ ಕಾಯಿ ಹಿಡಿದು ಜಲ ಶೋಧ‌ ನಡೆಸಿದ ಸಿಪಿಐ

ನೀರಿನ ಪಾಯಿಂಟ್ ಪತ್ತೆ ಹಚ್ಚಿ
ಬೊರ್ ವೆಲ್ ಕೊರೆಯಿಸುವ ವಿವಾದಕ್ಕೆ ತೆರೆ ಎಳೆದ ಪೊಲೀಸ್ ಅಧಿಕಾರಿ

ತುಮಕೂತು/ಗುಬ್ಬಿ :ತಾಲೂಕಿನ ಹೊಸ್ಕೆರೆಯಲ್ಲಿ ಸಿಪಿಐ ರಂಗಸ್ವಾಮಿಯ ನ್ಯಾಯಕ್ಕೆ ಫಿದಾ ಆದ ಗ್ರಾಮಸ್ಥರು

ಪೊಲೀಸರು ಅಂದ್ರೆ ಕೇವಲ ಕಳ್ಳರ ಜಾಡು ಹಿಡಿಯುವವರಷ್ಟೆ ಅಲ್ಲ.. ಅವರು ಜಲದ ಮೂಲವನ್ನೂ ಕಂಡು ಹೀಡಿತಾರೇ..ಹೌದು, ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಹೊಸ್ಕೆರೆಯಲ್ಲಿ ಪೊಲೀಸ್ ಸರ್ಕಲ್ ಇನ್ಸ್ ಪೆಕ್ಟರೊಬ್ಬರು ಅಂಗೈಯಲ್ಲಿ ತೆಂಗಿನ ಕಾಯಿ ಹಿಡಿದು ಜಲ ಸಂಶೋಧನೆ ನಡೆಸಿದ್ದಾರೆ. ಈ ಮೂಲಕ ಬೊರ್ ವೆಲ್ ಕೊರೆಯಿಸುವ ವಿವಾದಕ್ಕೆ ತಾತ್ಕಾಲಿಕ ಪರಿಹಾರ‌ ಸೂಚಿಸಿದ್ದಾರೆ.

ಹೊಸ್ಕೆರೆಯ ಶಿವನಳ್ಳಿ ಗೇಟ್ ಲ್ಲಿ ಎರಡು ಬೊರವೆಲ್ ಕೊರೆಯಿಸಲು ಗ್ರಾಮಪಂಚಾಯತಿಯಿಂದ ಸಿದ್ದತೆ ನಡೆಸಲಾಗಿತ್ತು. ಈ ಸ್ಥಳದಲ್ಲಿ ಬೊರ್ ವೆಲ್ ಕೊರೆದರೆ ಪಕ್ಕದ ಜಮೀನಿನ ನಟರಾಜು ರಾಜು, ಗಂಗಾಧರ, ಕಾಂತರಾಜು ಸೇರಿಂದಂತೆ ಹಲವರ ಬೊರ್ ವೆಲ್ ಗಳಿಗೆ ತೊಂದರೆಯಾಗುತಿತ್ತು. ಹಾಗಾಗಿ ಈ ಜಮೀನಿನ ಮಾಲೀಕರುಗಳು ಗ್ರಾಮಪಂಚಾಯತಿಯಿಂದ ಕೊರೆಯಿಸುವ ಬೊರವೆಲ್ ಗೆ ಅಡ್ಡಿಪಡಿಸಿದ್ರು. ಈ ನಡುವೆ ಭದ್ರತೆಗೆ ಆಗಮಿಸಿದ್ದ ಇನ್ಸೆಪೆಕ್ಟರ್, ಜನರ ಸಮಸ್ಯೆ ಪರಿಹಾರ ಸೂಚಿಸಲು ಮುಂದಾದ್ರು. ಸಿಪಿಐ ರಂಗಸ್ವಾಮಿ ತಾವೇ ಬೇರೆಕಡೆ ಜಲ ಮೂಲ ತೋರಿಸಿ ಕೊಟ್ಟು ಗ್ರಾಮದಲ್ಲಿ ಉಂಟಾದ ವಿವಾದಕ್ಕೆ ಪರಿಹಾರ ಸೂಚಿಸಿದ್ರು.

LEAVE A REPLY

Please enter your comment!
Please enter your name here