ಜಾಗೃತಿ ತಿಳುವಳಿಕೆ ಸಪ್ತಾಹ ಕಾರ್ಯಕ್ರಮ

0
199

ಬಳ್ಳಾರಿ /ಹೊಸಪೇಟೆ.ಸ್ಥಳೀಯ ಇಫ್ಕೋ ಪ್ರಾದೇಶಿಕ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಜಾಗೃತಿ ತಿಳುವಳಿಕೆ ಸಪ್ತಾಹ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಇಫ್ಕೋ ಸಂಸ್ಥೆ ವತಿಯಿಂದ ಆಯೋಜಿಸಲಾಗಿದ್ದ ಜಾಗೃತಿ ತಿಳುವಳಿಕೆ ಸಪ್ತಾಹಕ್ಕೆ ಇಫ್ಕೋ ಸಂಸ್ಥೆಯ ಉಪವ್ಯವಸ್ಥಾಪಕ ವಿಷ್ಣುತೀರ್ಥ ಕಲ್ಲೂರಕರ್ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಪ್ರತಿಯೊಬ್ಬರಲ್ಲಿ ಜಾಗೃತಿ ತಿಳುವಳಿಕೆ ಇದ್ದರೆ ಮಾತ್ರ ಮೋಸದಿಂದ ಪಾರಾಗಲು ಸಾಧ್ಯ. ಎಲ್ಲಿಯವರೆಗೆ ಮೋಸ ಹೋಗುವವರು ಇರುತ್ತಾರೋ ಅಲ್ಲಿಯವರೆಗೆ ಮೋಸ ಮಾಡುವವರು ಇರುತ್ತಾರೆ. ಜಾಗೃತಿ ತಿಳುವಳಿಕೆ  ಇದ್ದರೆ ನಾವು ಮೋಸದಿಂದ ಪಾರಾಗಲು ಸಾಧ್ಯ ಎಂದರು. ಅಲ್ಲದೆ  ಇಫ್ಕೋ ಸಂಸ್ಥೆಯು ರೈತರಿಗೆ ಯೋಗ್ಯ ಧರದಲ್ಲಿ ಉತ್ತಮ ಗುಣಮಟ್ಟದ ರಸಗೊಬ್ಬರಗಳನ್ನು ಸಹಕಾರ ಸಂಘಗಳಿಗೆ ನೇರವಾಗಿ ಸಕಾಲದಲ್ಲಿ ಐದು ದಶಕಗಳಿಂದ ಒದಗಿಸುತ್ತಾ ಬಂದಿರುವುದು ಹೆಮ್ಮೆಯ ವಿಷಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿರೇಶ್ ಕಗ್ಗಲ್ ಮಾತನಾಡಿ, ಇಫ್ಕೋ ಸಂಸ್ಥೆ ಯವರು ಕೈಗೊಂಡಿರುವ ಜಾಗೃತಿ ತಿಳುವಳಿಕೆ ಬಗ್ಗೆ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಅಲ್ಲದೆ ರೈತರು ಸಹಕಾರ ಸಂಘಗಳ ಮುಖಾಂತರವೇ ಇಫ್ಕೋ ರಸಗೊಬ್ಬರ ಖರೀದಿಸುವಂತೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಹಿರಿಯ ಸಹಕಾರಿಗಳಾದ ವಸಂತಕುಮಾರ, ವಿರೇಶಪ್ಪ, ಮಲ್ಲಿಕಾರ್ಜುನ, ರೇವಣಸಿದ್ದಪ್ಪ,  ಹೊಸಮನೆ ಗಿರೀಶ ಕುಮಾರ, ಇಫ್ಕೋ ಲೆಕ್ಕಾಧಿಕಾರಿ ಕೆ.ವಿ.ರಾಮಕೃಷ್ಣಪ್ಪ ಸೇರಿದಂತೆ ಸಹಕಾರಿಗಳು, ರೈತರು ಹಾಗೂ ಇಫ್ಕೋ ಸಿಬ್ಬಂದಿ ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ಇಫ್ಕೋ ಅಧಿಕಾರಿಗಳು, ಸಿಬ್ಬಂದಿ, ರೈತರು ಹಾಗೂ ಸಹಕಾರಿಗಳು ಜಾಗೃತಿ ತಿಳುವಳಿಕೆ ಹೊಂದುವ ಪ್ರತಿಜ್ಞಾವಿಧಿ ಸ್ವೀಕರಿಸಿದರು.
ನಂತರ ನೆರೆದಿದ್ದ ಜಾಗೃತಿ ತಿಳುವಳಿಕೆ ಕಾರ್ಯಕ್ರಮದ ಪ್ರಯುಕ್ತ ಪ್ರಮಾಣವಚನ ಸ್ವೀಕರಿಸಿದರು.
ಇಫ್ಕೋ ಸಂಸ್ಥೆಯ ಬಳ್ಳಾರಿ ಜಿಲ್ಲಾ ಕ್ಷೇತ್ರಾಧಿಕಾರಿ ಸಿದ್ದಾರೂಡ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ರೇವಣಸಿದ್ದಪ್ಪ ವಂದಿಸಿದರು.

LEAVE A REPLY

Please enter your comment!
Please enter your name here