ಜಾನುವಾರು ಮಾರುಕಟ್ಪೆಗಳ ನಿಯಂತ್ರಣ. ಸ್ವಾಗತಾರ್ಹ

0
271

ಬಳ್ಳಾರಿ : ದೇಶದಲ್ಲಿ ಗೋವು ಗಳ ಸಹಿತ ಇತರ ಹಲವು ಪ್ರಾಣಿಗಳ ಮೇಲೆ ನಡೆಯುತ್ತಿದ್ದ ಕ್ರೌರ್ಯವನ್ನು ತಡೆಗಟ್ಟಲು ಘನತೆವೆತ್ತ ಕೇಂದ್ರ ಸರ್ಕಾರದ ಪರಿಸರ ಸಚಿವಾಲಯವು “ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ (ಜಾನುವಾರು ಮಾರುಕಟ್ಟೆಗಳ ನಿಯಂತ್ರಣ) ಕಾಯ್ದೆ – 2017” ಅನ್ನು ಹೃದಯಪೂರ್ವಕವಾಗಿ ಸ್ವಾಗತಿಸಿದ್ದಾರೆ.

ಈಗಾಗಲೇ ಇದ್ದ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಕೇಂದ್ರ ಸರ್ಕಾರವು ಪ್ರಾಣಿಗಳ ಮೇಲೆ ನಡೆಯುತ್ತಿದ್ದ ಹಿಂಸೆಗೆ ಹಾಕಿದಂತಾಗಿದೆ. ಇದರಿಂದಾಗಿ ಮಾಂಸಕ್ಕಾಗಿ ನಡೆಯುತ್ತಿದ್ದ ಗೋವುಗಳ ಅಕ್ರಮ ಮಾರಾಟ ಸಾಗಾಟದ ಮೇಲೆ ನಿಯಂತ್ರಣ ತರಲು ಸಾಧ್ಯವಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿರುವ ಅವರು ಮಾರುಕಟ್ಟೆಯ ಮೂಲಕವೇ ಪ್ರಾಣಿಗಳನ್ನು ಮಾರಾಟ ಮಾಡಲು ಹೊಸ ಕಾಯ್ದೆಯಲ್ಲಿ ತಿದ್ದುಪಡಿ ತರಲಾಗಿದ್ದು, ಇದರಿಂದ ಮಧ್ಯವರ್ತಿಗಳ ಹಾವಳಿ ತಪ್ಪಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅಲ್ಲದೇ ಅಕ್ರಮ ಗೋ ಸಾಗಾಟಗಳ ಮೇಲೆ ನಿಯಂತ್ರಣ ಬಂದು ಅವ್ಯಾಹತ ಮಾಫಿಯಾ ರೂಪ ಪಡೆದಿದ್ದ ಈ ವ್ಯವಹಾರವು ಇನ್ನು ಮುಂದೆ ಕಾನೂನಿನ ಕಣ್ಗಾವಲಿನಲ್ಲಿ ನಡೆಯಲಿದೆ. ಇದರಿಂದ ರೈತರಿಗೇ ಅನುಕೂಲ ಆಗಲಿದೆ ಎಂದಿದ್ದಾರೆ.

ಆದರೆ ಕೆಲವರು ಅನಗತ್ಯ ವಿಚಾರಗಳನ್ನು ಹಬ್ಬಿಸುತ್ತಿದ್ದು, ವಾಣಿಜ್ಯಿಕ, ಮಾನವೀಯ ತಳದಿಯ ಕಾನೂನಿನ ವಿಚಾರವನ್ನು ಈಗ ಭಾವನಾತ್ಮಕಗೊಳಿಸುವ ಹುನ್ನಾರ ಮಾಡಲಾಗುತ್ತಿದೆ. ಆ ಮೂಲಕ ರೈತರು ಹಾಗೂ ಕೆಲ ನಿರ್ದಿಷ್ಟ ಸಮುದಾಯಗಳನ್ನು ಈ ಕಾಯ್ದೆ ವಿರುದ್ಧ ಎತ್ತಿ ಕಟ್ಟಲಾಗುತ್ತಿದೆ. ಆದ್ದರಿಂದ ಸಮಸ್ತ ಜನರು ಹಾಗೂ ರೈತ ಬಾಂಧವರು ಗೊಂದಲಕ್ಕೀಡಾಗಬಾರದೆಂದು ಶಿವಕೃಷ್ಣ ಮನವಿ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಈ ಕಾಯ್ದೆಯನ್ನು ಪಕ್ಷಬೇಧ ಮರೆತು ಬೆಂಬಲಿಸಬೇಕಿದೆ ಎಂದು ಪತ್ರಿಕೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ

LEAVE A REPLY

Please enter your comment!
Please enter your name here