ಜಾಮೀಯಾ ಮಸೀದಿ ಕಮಿಟಿ ರಾಜ್ಯ ವಕ್ಫ್ ಬೋರ್ಡ್ ಗೆ ಸೇರ್ಪಡೆ

0
116

ಚಿಕ್ಕಬಳ್ಳಾಪುರ/ಚಿಂತಾಮಣಿ: ನಗರದ ಜಾಮೀಯಾ ಮಸೀದಿ ಕಮಿಟಿಯನ್ನು ಇದೀಗ ನೂತನವಾಗಿ ರಾಜ್ಯ ವಕ್ಫ್ ಬೋರ್ಡ್ನಲ್ಲಿ ಅಧಿಕೃತವಾಗಿ ನೋಂದಾಯಿಸಲಾಗಿದೆ. ಇದರಂತೆ ನೂತನ ಕಮಿಟಿಗೆ ಸರ್ವಾನುಮತದಿಂದ ಪದಾಧಿಕಾರಿಗಳನ್ನುಆಯ್ಕೆ ಮಾಡಲಾಗಿದೆ.
ಅಧ್ಯಕ್ಷರಾಗಿ:ಗೌಸ್ ಪಷಾ ( ಮೂನ್ ಸ್ಟರ್),ಉಪಾಧ್ಯಕ್ಷರಾಗಿ :ಜಿ ಎಂ ಇಬ್ರಾಹಿಮ್, ಕಾರ್ಯದರ್ಶಿ:ಮೊಹಮ್ಮದ್ ಇನಯಾತ್ ಉಲ್ಲಾ.,
ಕಜಾಂಚಿ: ಮುಜೀರ್ ಅಹಮದ್. ನಿರ್ಧೇಶಕರು: ಶೇಕ್ ಸಾಧೀಕ್ ರಜಾವಿ, ಸಿಕಾಂದರ್ ಬಾಬು, ಜಾಮೀರ್ ಉಲ್ಲಾ ಖಾನ್, ರಿಯಾಜ್ ಸಾಬ್, ಸೈಯದ್ ಅಲೀಂ ಮೌಲ,ಅಕಮಲ್ ಖಾನ್ . ಸೇರಿದಂತೆ 21 ಸದಸ್ಯರು ಇರುತ್ತಾರೆ. ಈ ಕಮಿಟಿಯು 3 ವರ್ಷಗಳ ಅವಧಿ ಕಾರ್ಯನಿರ್ವಾಹಿಸಲಿದೆ. ಕಮಿಟಿಯು ಸಭೆಯಲ್ಲಿ ಈ ಕೆಳಕಂಡತೆ ಅಭಿವೃದ್ಧಿ ಕಾರ್ಯಗಳನ್ನು ಕಾಲಕಾಲಕ್ಕೆ ಹಮ್ಮಿ ಕೊಳ್ಳಲು ನಿರ್ಧರಿಸಲಾಗಿದ್ದು ಕಮಿಟಿಯು ನಗರ, ತಾಲ್ಲೂಕಿನ ನಾದ್ಯಂತ ಇರುವ ವಕ್ಫ್ ಬೋರ್ಡ್ ಹಾಗೂ ಜಾಮೀಯಾ ಮಸೀದಿಯ ಆಸ್ತಿಗಳ ವಿಚಾರವನ್ನು ನಿರ್ವಹಿಸಲಿದೆ. ಚಿಂತಾಮಣಿ ನಗರದ ದೊಡ್ಡಪೇಟೆ ರಸ್ತೆಯಲ್ಲಿ ರುವ ಜಾಮೀಯಾ ಮಸೀದಿ ಗೆ ಸೇರಿದ ಆಸ್ತಿ ಯಲ್ಲಿ 111 ಅಂಗಡಿ ಮಳಿಗೆಗಳು ನೂತನ ವಾಗಿ ನಿರ್ಮಾಣ ಮಾಡಲಾಗುವುದು.ನಗರದ ಶಿಢ್ಲಘಟ್ಟ ರಸ್ತೆ ಈದ್ಗಾ ಮೈದಾನದ ಜಾಗದಲ್ಲಿ ಕಲ್ಯಾಣ ಮಂಟಪ,ಮಸೀದಿ, ರುದ್ರಭೂಮಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗುವುದಾಗಿ ಕಮಿಟಿ ಅಧ್ಯಕ್ಷ ಗೌಸ್ ಪಾಷ ವಾಹಿನಿಗೆ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here