ಜಿಲ್ಲಾಡಳಿತದಿಂದ ವಿಶ್ವ ಯೋಗ ದಿನಾಚರಣೆ

0
111

ಬಳ್ಳಾರಿ: ವಿದೇಶದ ವಿಚಾರಗಳು ವಸ್ತುಗಳ ಬಗ್ಗೆ ನಮ್ಮಲ್ಲಿ ಆಸಕ್ತಿ ಹೆಚ್ಚು, ಆದರೆ ನಮ್ಮದೇ ಆಗಿರುವ ಯೋಗ, ಆಯುರ್ವೇದಿಕ್ ಬಗ್ಗೆ ನಮಗೆ ಆಸಕ್ತಿ ಇಲ್ಲ ಎಂದು ಬಳ್ಳಾರಿ ಜಿಲ್ಲಾಧಿಕಾರಿ ರಾಮ್ ಪ್ರಸಾತ್ ಮನೋಹರ್ ಹೇಳಿದರು.

ಅವರು ಜಿಲ್ಲಾಡಳಿತ, ಆಯುಷ್ ಇಲಾಖೆ, ಜಿಲ್ಲಾ ಪಂಚಾಯತ್ ವತಿಯಿಂದ ಆಯೋಜಿಸಿದ್ದ ವಿಶ್ವ ಯೋಗ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಆದರೆ ಇಂದು ವಿದೇಶದ ಜನ ಯೋಗ ಕಲಿಯಲು ಭಾರತಕ್ಕೆ ಬರುತ್ತಿದ್ದಾರೆ. ಯೋಗದ ಬಗ್ಗೆ ವಿದೇಶಿಗರು ತಿಳಿಯಲು ಮುಂದಾಗಿದ್ದಾರೆ. ಹೀಗಾಗಿ ನಾವು ನಮ್ಮದೇ ಆಗಿರುವ ಯೋಗದ ಬಗ್ಗೆ ತಿಳಿದುಕೊಳ್ಳಲು ನಾವು ಮುಂದಾಗಬೇಕಿದೆ ಎಂದರು.
ನಮ್ಮ ನಿತ್ಯದ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದುರ ಜೊತೆಗೆ ಆರೋಗ್ಯಪೂರ್ಣರಾಗಿರಲು ಯೋಗ ಸಹಕಾರಿ ಎಂದು ಅಭಿಪ್ರಾಯ ಪಟ್ಟರು.
ಯಾವುದೇ ಚಿಕಿತ್ಸೆ, ಔಷಧಿಯ ಅಗತ್ಯವಿಲ್ಲದೆ ಯೋಗದಿಂದ ಮನುಷ್ಯರಿಗೆ ಬರವ ರೋಗವನ್ನು ತಡೆಗಟ್ಟಬಹುದಾಗಿದೆ ಎಂದು ಹೇಳಿದ ರಾಮ್ ಪ್ರಸಾತ್ ಮನೋಹರ್ ಅವರು ತಮ್ಮ ವೈಯಕ್ತಿಕ ಬದುಕಿನಲ್ಲಿ ತಮಗೆ ಎದುರಾದ ಚಿಕ್ಕ ಆರೋಗ್ಯ ಸಂಬಂಧಿ ಸಮಸ್ಯೆಯನ್ನು ಪ್ರಾಣಾಯಾಮ ಮಾಡುವ ಮೂಲಕ ಬಗೆಹರಿಸಿಕೊಂಡ ಬಗ್ಗೆ ತಿಳಿಸಿದರು.

ಜಿಲ್ಲಾ ಪಂಚಾಯತ್ ಅಧ್ಯಕ್ಷೆ ದೀನಾ ಮಂಜುನಾಥ್, ಹೆಚ್ಚುವರಿ ಜಿಲ್ಲಾಧಿಕಾರಿ ವಿಜಯಮಹಾಂತೇಶ್, ಜಿಲ್ಲಾ ಆರೋಗ್ಯಾಧಿಕಾರಿ ರಮೇಶ್, ಮೇಯರ್ ವೆಂಕಟರಮಣ, ಆಯುಕ್ತ ಎಂ ಕೆ ನೆಲವಡಿ ಕಾರ್ಯಕ್ರಮದಲ್ಲಿ ಹಾಜರಿದ್ದರು.

ಇದೇ ಸಂದರ್ಭ ಯೋಗ ಪ್ರದರ್ಶನದಲ್ಲಿ ಭಾಗಿಯಾದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು.

LEAVE A REPLY

Please enter your comment!
Please enter your name here