ಜಿಲ್ಲಾಡಳಿತ ವತಿಯಿಂದ ಪರಿನಿರ್ವಾಣ ದಿನಾಚರಣೆ..

0
204

ಚಿಕ್ಕಬಳ್ಳಾಪುರ/ಚಿಕ್ಕಬಳ್ಳಾಪುರ:ವಿಶ್ವರತ್ನ ಡಾ.ಬಾಬಾ ಸಾಹೇಬರ 61ನೇ ಪರಿನಿರ್ವಾಣ ದಿನ.ವಿಶ್ವರತ್ನ ಮಹಾ ಮಾನವತಾವಾದಿ ಶೋಷಿತರ ಧ್ವನಿ ಬಾಬಾ ಸಾಹೇಬ ಡಾ.ಬಿ.ಆರ್.ಅಂಬೇಡ್ಕರ್ ರವರ 61 ನೇ ಪರಿ ನಿರ್ವಾಣ ದಿನವನ್ನ ಜಿಲ್ಲಾಡಳಿತ ವತಿಯಿಂದ ನಗರದ ಡಾ.ಬಿ ಆರ್. ಅಂಬೇಡ್ಕರ್ ಕಾಲೇಜು ವಿದ್ಯಾರ್ಥಿ ನಿಲಯದಲ್ಲಿ ಹಮ್ಮಿಕೊಂಡಿದ್ದರು ಈ ಕಾರ್ಯ ಕ್ರಮದ ಸಮಯದಲ್ಲಿ ಕೆ ವಿ ದತ್ತಿ ಮತ್ತು ಪಂಚಗಿರಿ ವಿದ್ಯಾ ಸಂಸ್ಥೆಗಳ ಅದ್ಯಕ್ಷರು ಮತ್ತು ಸಮಾಜ ಸೇವಕರು ಆದ ನವೀನ ಕಿರಣ್ ರವರು ಬಾಬಾ ಸಾಹೇಬ ಡಾ.ಬಿ ಆರ್. ಅಂಬೇಡ್ಕರ್ ರವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿ ಸಮಾಜದ ಕಟ್ಟ ಕಡೆಯ ವ್ಯಕ್ತಿ ಗು ಸಹ ಸಮಾನತೆ ಸಿಗಬೇಕೆಂದು ಹೋರಾಟ ಮಾಡಿದಂತಹ ವ್ಯಕ್ತಿ ಬಾಬಾ ಸಾಹೇಬ ಡಾ.ಬಿ ಆರ್. ಅಂಬೇಡ್ಕರ್ ರವರು ಅವರ ಸಿದ್ಧಾಂತ ವನ್ನ ಎಲ್ಲರೂ ಪಾಲನೆ ಮಾಡಿದರೆ ದೇಶದ ಅಭಿವೃದ್ಧಿಯಾಗುವುದರಲ್ಲಿ ಸಂದೇಹವಿಲ್ಲ ದೇಶ ಅಲ್ಲ ಇಡೀ ವಿಶ್ವವೇ ಗೌರವಿಸುವಂತಹ ಮಹಾನ್ ಚೇತನ ಡಾ.ಬಿ ಆರ್. ಅಂಬೇಡ್ಕರ್ ರವರು ಎಂದು ತಿಳಿಸಿದರು..

ವರದಿಗಾರರು
ಅರಿಕೆರೆ ಮುನಿರಾಜು
ನಮ್ಮೂರು ಟಿವಿ
ಚಿಕ್ಕಬಳ್ಳಾಪುರ

LEAVE A REPLY

Please enter your comment!
Please enter your name here