ಜಿಲ್ಲಾಸ್ಪತ್ರೆಗೆ ಮುತ್ತಿಗೆ ಹಾಕಿ ಪ್ರತಿಭಟನೆ

0
163

ಕೋಲಾರ :ಜಿಲ್ಲಾಸ್ಪತ್ರೆಯ ನರ್ಸ್ಗಳಿಂದ ಮೂಲಭೂತ ಸೌಲಭ್ಯಗಳನ್ನು ನೀಡುವಂತೆ ಆಗ್ರಹಿಸಿ, ಜಿಲ್ಲಾ ಶಸ್ತ್ರಚಿಕಿತ್ಸಕರ ಕೊಠಡಿಗೆ ಮುತ್ತಿಗೆ ಹಾಕಿ ಪ್ರತಿಭಟನೆ, ನರ್ಸ್ ಗಳ ವಿಶ್ರಾಂತಿ ಕೊಠಡಿ, ಶೌಚಾಲಯ ನೈರ್ಮಲ್ಯ ಕಾಪಾಡಿಲ್ಲವೆಂಬ ಆರೋಪ, ಜಿಲ್ಲಾ ಶಸ್ತ್ರಚಿಕಿತ್ಸಕ ರಿಂದ ಮಾನಸಿಕ ಕಿರುಕುಳ ಆರೋಪ .ಪ್ರತಿಭಟನೆ.

ಸಿಬ್ಬಂದಿ ಮಾತನಾಡಿ ಏನೇ ಸಮಸ್ಯೆಗಳನ್ನ ಹೇಳಿ ಕೊಳ್ಳಲು ಹೋದರು ಪ್ರಥಮದರ್ಜೆ ನೌಕರರ ಬಳಿ ಮಾತನಾಡಿ ಎನ್ನುತ್ತಾರೆ ,ಅವರರನ್ನು ಕೇಳಿದರೆ ಜಿಲ್ಲಾ ಶಸ್ತ್ರಚಿಕಿತ್ಸಕರ ಬಳಿ ಕೇಳಿ ಎಂದು ಸಮಸ್ಯೆಗಳನ್ನು ಬಗೆಹರಿಸದೆ ಜಾರಿಕೊಳ್ಳುತ್ತಾರೆ.ನಮಗೆ ರಜೆ ಬೇಕಾದ ಸಂದರ್ಭದಲ್ಲಿ ಕೇಳಿದರೆ ನೀಡುವುದಿಲ್ಲ.ಹೆಚ್ಚಿನ ಕೆಲಸದ ಹೊರೆಹಾಕುತ್ತಾರೆ,ಪ್ರಯೋಗಾಲಯದಲ್ಲೂ ನರ್ಸ್ಗಳೇ ಕಾರ್ಯ ನಿರ್ವಹಿಸುವಂತಾಗಿದೆ.ತಮಗೆ ಬೇಕಾದವರಿಗೆ ಬೇಕಾದ ಸ್ಥಳಗಳಲ್ಲಿ ನಿಯೋಜಿಸುತ್ತಾರೆ ಎಂದು ದೂರಿದರು. ಜಿಲ್ಲಾ ಶಸ್ತ್ರಚಿಕಿತ್ಸಕರಾದ ಶಿವಕುಮಾರ್ ಮಾತನಾಡಿ ಸಿಬ್ಬಂದಿಯ ಎಲ್ಲ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಬರವಸೆನೀಡಿದ್ದಾರೆ.

LEAVE A REPLY

Please enter your comment!
Please enter your name here