ಜಿಲ್ಲಾ ಅಧ್ಯಕ್ಷರಾಗಿ ಕೋ ನಾ ಮಂಜುನಾಥ್

0
165

ಕೋಲಾರ: ಹಿಂದುಳಿದ ವರ್ಗಗಳ ಪತ್ರಕರ್ತರು ರಾಜ್ಯದಲ್ಲಿ ಒಂದಾಗಿ ಸದೃಡರಾಗುವ ಉದ್ದೇಶದಿಂದ ಸಂಘ ರಚನೆ ಮಾಡಿದ್ದೇವೆ ಹೊರತು ಬೇರೆ ಯಾವುದೆ ಉದ್ದೇಶ ಇಲ್ಲ. ಕೋಲಾರದಲ್ಲಿ ಹಿಂದುಳಿದ ವರ್ಗಗಳ ಮಾನ್ಯತೆ ಪಡೆದ ಸಂಪಾದಕರು ಹಾಗೂ ವರದಿಗಾರರ ಸಂಘದ ರಾಜ್ಯ ಅದ್ಯಕ್ಷ ಮಣಿ ಅವರು ಅಭಿಪ್ರಾಯ ಪಟ್ಟಿದ್ದಾರೆ. ‌
ಕೋಲಾರದಲ್ಲಿ ನೂತನ ಪದಾಧಿಕಾರಿಗಳ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ವ್ಯವಸ್ಥೆ ಸರಿಪಡಿಸ ಬೇಕು ಹಾಗಾಗಿ ಹಿಂದುಳಿದ ವರ್ಗದವರು ಒಂದಾಗ ಬೇಕು ಎಂದು ಅಭಿಪ್ರಾಯಪಟ್ಟರು. ಇದೆ ವೇಳೆ ಜೂನ್ 6 ರಂದು ಹಮ್ಮಿಕೊಂಡಿರುವ ರಾಜ್ಯ ಸಮಾವೇಶದ ಆಹ್ವಾನ ಪತ್ರಿಕೆ ಬಿಡುಗಡೆ ಗೊಳಿಸಿದ್ರು.
ಸಂಪಾದಕರ ಹಾಗೂ ವರದಿಗಾರರ ಸಂಘದ ಜಿಲ್ಲಾ ಅಧ್ಯಕ್ಷರಾಗಿ ಕೋ ನಾ ಮಂಜುನಾಥ್ ಅವರನ್ನು ಆಯ್ಕೆ ಮಾಡಲಾಯಿತು

LEAVE A REPLY

Please enter your comment!
Please enter your name here