ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ.

0
282

ಕೋಲಾರ:ಚುನಾವಣೆಗೆ ಇನ್ನೂ ಆರು ತಿಂಗಳು ಬಾಕಿ ಇದ್ದಂತೆಯೆ ಚುನಾವಣಾ ಪ್ರಚಾರ ಆರಂಭಗೊಂಡಿದೆ.ಸಿ.ಎಂ.ಸಿದ್ದರಾಮಯ್ಯ, ರಾಜ್ಯದ ಪ್ರಭಾವಿ ರಾಜಕಾರಣಿ ಡಿ.ಕೆ.ಶಿವಕುಮಾರ್, ಪರಮೇಶ್ವರ್ ಮುಂತಾದ ರಾಜ್ಯದನಾಯಕರು,ಜಿಲ್ಲೆಯ ಎಲ್ಲ ಕಾಂಗ್ರೆಸ್ ಶಾಸಕರು,ಸಚಿವರು ಮನೆ ಮನೆಗೂ ಕಾಂಗ್ರೆಸ್ ಎಂಬ ಕಾರ್ಯಕ್ರಮವನ್ನು ರಾಜ್ಯದ ಗಡಿಜಿಲ್ಲೆ,ದೇವ ಮೂಲೆಯಲ್ಲಿರುವ ಕುರುಡುಮಲೆಯಿಂದ ಪ್ರಾರಂಭಗೊಳಿಸಿದರು.ನಂತರ ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ಸಮಾವೇಶ ಪ್ರಾರಂಭವಾಯಿತು.ಜಿಲ್ಲೆಯ ಎಲ್ಲಾ ತಾಲ್ಲೂಕಿನ ಕಾಂಗ್ರೆಸ್ ಕಾರ್ಯಕರ್ತರು ಜಮಾಯಿಸಿದ್ದರು.ಸರ್ಕಾರದ ಸಾಧನೆಗಳನ್ನು ಪ್ರತಿ ಮನೆಗೂ ತಲುಪಿಸುವ ಕಾರ್ಯವನ್ನು ಮಾಡಿ,ಜಿಲ್ಲೆಯ 6 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸುವಂತೆ ಎಲ್ಲ ಕಾರ್ಯಕರ್ತರು ಶ್ರಮಿಸಬೇಕು ಎಂದರು.ಕಾರ್ಯಕ್ರಮದುದ್ದಕ್ಕೂ ಕೇಂದ್ರ ಸರ್ಕಾರವನ್ನು ಅಲ್ಲೆಗೆಳೆಯುತ್ತಿದ್ದರು.

ಈ ಸಂದರ್ಭದಲ್ಲಿ ಮುಳಬಾಗಿಲು ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದ ಕೊತ್ತೂರು ಮಂಜುನಾಥ್ ಕಾಂಗ್ರೆಸ್ ಗೆ ಸೇರ್ಪಡೆಗೊಂಡು ಮುಂದಿನ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಗೆ ಸೇರ್ಪಡೆಯಾದರು.ಜಿಲ್ಲಾ ಕಾಂಗ್ರೆಸ್ ಸಮಾವೇಶದಲ್ಲಿ ಕೊತ್ತೂರು ಮೇಲುಗೈ.ಕಾಂಗ್ರೆಸ್ ಸಮಾವೇಶದಲ್ಲಿ ಮುಳಬಾಗಿಲು ಶಾಸಕ ಕೊತ್ತೂರು ಮಂಜುನಾಥ್ ಕಾಂಗ್ರೆಸ್ ಗೆ ಸೇರ್ಪಡೆಯಾಗುವ ಕಾರ್ಯಕ್ರಮವು ಆಗಿದ್ದು,ನೆರೆದಿದ್ದ ಕಾರ್ಯಕರ್ತರಲ್ಲಿ ಕೊತ್ತೂರು ಅಭಿಮಾನಿಗಳೇ ಹೆಚ್ಚಾಗಿದ್ದು,ಅವರ ಭಾಷಣ ಮುಗಿದ ತಕ್ಷಣ ಕಾರ್ಯಕರ್ತರು ಸಭೆಯಿಂದ ಹೊರನಡೆದರು.ಸ್ಥಳೀಯ ಕಾರ್ಯಕರ್ತರು ಇದನ್ನು ತಡೆಯಲು ಯತ್ನಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಮತ್ತು ಕೊತ್ತೂರು ಮಂಜುನಾಥರ ಹೆಸರು ಹೇಳಿದಂತೆ ಅವರ ಪರ ಘೋಷಣೆಗಳು ಹೆಚ್ಚಾಗಿ ಕಾಣುತ್ತಿತ್ತು.
ಸಿ.ಎಂ.ಸಿದ್ದರಾಮಯ್ಯನ ಭಾಷಣದ ವೇಳೆಗೆ ಕುರ್ಚಿಗಳು ಖಾಲಿಯಾಗಿದ್ದು,ಕುರ್ಚಿಗಳಿಗೆ
ಭಾಷಣ ಮಾಡಿದ್ದು ಕಂಡುಬಂತು.

LEAVE A REPLY

Please enter your comment!
Please enter your name here