ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು..

0
261

ಚಿಕ್ಕಬಳ್ಳಾಪುರ:ಡಿಸೆಂಬರ್ 17 ರಂದು 2 ನೇ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು.ಚುಟುಕು ಸಾಹಿತ್ಯ ಪರಿಷತ್ತು ವತಿಯಿಂದ ಹಮ್ಮಿಕೊಂಡಿರುವ 2 ನೇ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಜಿಲ್ಲಾ ಸಮ್ಮೇಳನಾದ್ಯಕ್ಷರಾದ ಮಂಚೇನಹಳ್ಳಿ ಸಾ.ನ ಲಕ್ಷ್ಮಣಗೌಡ ರನ್ನು ಅವರ ಮನೆಯಲ್ಲಿ ಸನ್ಮಾನಿಸುವ ಮೂಲಕ ಈ ತಿಂಗಳು 17 ರಂದು ಚಿಕ್ಕಬಳ್ಳಾಪುರ ಅಂಬೇಡ್ಕರ್ ಭವನದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ತುಂಬು ಹೃದಯದಿಂದ ಆಮಂತ್ರಣ ನೀಡಿ ಸ್ವಾಗತಿಸಲಾಯಿತು.ಸಮ್ಮೇಳನಾದ್ಯಕ್ಷ ಸಾ.ನ ಲಕ್ಷ್ಮಣ ಗೌಡ ಮಾತನಾಡಿ ಸುಮಾರು 40 ವರ್ಷಗಳ ನನ್ನ ಸಾಹಿತ್ಯ ಸೇವಯನ್ನು ಗುರ್ತಿಸಿ ಈ ಭಾರಿ ಸಮ್ಮೇಳನಾಧ್ಯಕ್ಷರನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಿರುವ ಚುಟುಕು ಸಾಹಿತ್ಯ ಪರಿಷತ್ತಿನ ಜಿಲ್ಲಾ ಸಮ್ಮೇಳನವನ್ನು ತಮ್ಮೆಲ್ಲರ ಸಹಕಾರದಂತೆ ಯಶಸ್ವಿಯಾಗಿ ಮಾಡಲು ಸಾಹಿತ್ಯ ಸೇವೆಗೆ ಸದಾ ಮುಡಿಪಾಗಿರುತ್ತೇನೆ ಎಂದರು.ಈ ಸಂದರಭದಲ್ಲಿ ಚುಟುಕು ಸಾಹಿತ್ಯ ಪರಿಷತ್ತು ಜಿಲ್ಲಾದ್ಯಕ್ಷ ಚಲಪತಿಗೌಡ ಮಾತನಾಡಿ ಸಾಹಿತ್ಯಕ್ಕೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡುವ ನಿಟ್ಟಿನಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದು ಸಂತೋಷದಿಂದ ಯಶಸ್ವಿಯಾಗಿ ನಡೆಸಿಕೊಡಬೇಕೆಂದು ಜಿಲ್ಲಾ ಸಮ್ಮೇಳನಾದ್ಯಕ್ಷರನ್ನು ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಚುಟುಕು ಸಾಹಿತ್ಯ ಪರಿಷತ್ತು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯಲುವಳ್ಳಿ ಸೋಣ್ಣೇಗೌಡ, ಜಿಲ್ಲಾ ಕಾರ್ಯದರ್ಶಿ ಅಶ್ವಥ್ ನಾರಾಯಣ್, ಬಾಗೇಪಲ್ಲಿ ತಾಲ್ಲೂಕು ಅಧ್ಯಕ್ಷ ಚಿನ್ನಿಕೈವಾರಮಯ್ಯ, ಗೌರಿಬಿದನೂರು ತಾಲ್ಲೂಕು ಅದ್ಯಕ್ಷೆ ಪ್ರಭಾನಾರಾಯಣಗೌಡ, ಗುಡಿಬಂಡೆ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಪ್ರಸ್ ಸುಬ್ಬರಾಯಪ್ಪ, ಶಿಡ್ಲಘಟ್ಟ ತಾಲ್ಲೂಕು ಅಧ್ಯಕ್ಷ ಈ ಧರೆ ಪ್ರಕಾಶ್, ಚಿಕ್ಕಬಳ್ಳಾಪುರ ತಾಲ್ಲೂಕು ಅಧ್ಯಕ್ಷ ನಾಗಭೂಷಣರೆಡ್ಡಿ, ಪ್ರಧಾನ ಕಾರ್ಯದರ್ಶಿ ನಾಗೇಂದ್ರ ಸಿಂಹ, ಶಿಡ್ಲಘಟ್ಟ ತಾಲ್ಲೂಕು ಕೋಶಾದ್ಯಕ್ಷ ಸುಂದರಾಚಾರಿ, ಟಿ.ಟಿ ನರಸಿಂಹಪ್ಪ, ಶಿವರಾಜು, ಭೈರಪ್ಪ, ರಾಜೇಂದ್ರ, ನಾರಾಯಣಗೌಡ ಹಾಗೂ ಮುಂತಾದವರು ಭಾಗವಹಿದ್ದರು.

 

ವರದಿಗಾರರು
ಅರಿಕೆರೆ ಮುನಿರಾಜು
ನಮ್ಮೂರು ಟಿವಿ
ಚಿಕ್ಕಬಳ್ಳಾಪುರ

LEAVE A REPLY

Please enter your comment!
Please enter your name here