ಜಿ.ಪಂ. ಅಧ್ಯಕ್ಷೆ ಗ್ರಾಮ ವಾಸ್ತವ್ಯ..!?

0
633

ಬಯಲು ಶೌಚಮುಕ್ತ ಗ್ರಾಮಕ್ಕಾಗಿ ಅಧ್ಯಕ್ಷರ ಗೋಠೆ ಗ್ರಾಮವಾಸ್ತವ್ಯ.

ಬಾಗಲಕೋಟೆ: ಜಿಲ್ಲಾ ಪಂಚಾಯತ್ ಅಧ್ಯಕ್ಷೆ ವೀಣಾ ಕಾಶಪ್ಪನವರ್ ಬಯಲು ಶೌಚಮುಕ್ತ ಗ್ರಾಮಕ್ಕಾಗಿ ಜಮಖಂಡಿ ತಾಲೂಕಿನ ಗೋಠೆ ಗ್ರಾಮದಲ್ಲಿ ವಾಸ್ತವ್ಯ ಹೂಡಿ ಗ್ರಾಮಸ್ಥರಲ್ಲಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದ್ರು.ಬೆಳಗ್ಗೆಯಿಂದಲೆ ಗ್ರಾಮದಲ್ಲಿ ಜಿಲ್ಲಾಡಳಿತ ಬಿಡುಬಿಟ್ಟಿದ್ದು ಗ್ರಾಮ ದೂದ್ದಕ್ಕೂ ಸ್ವಚ್ಚತೆ ಹಾಗೂ ಸುಚಿತ್ವದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ನಡಿಸಿದ್ರು.ಗೋಠೆ ಗ್ರಾಮದಲ್ಲಿ 1094 ಮನೆಗಳಿದ್ದು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ವೀಣಾ ಕಾಶಪ್ಪನವರ್ ಮನೆ-ಮನೆ ಭೇಟಿನೀಡಿ ಬಯಲು ಶೌಚ್ಯಮುಕ್ತ ಗ್ರಾಮವನ್ನಾಗಿ ಮಾಡಲು ಸಹಕರಿಸಿ ಎಂದ್ರು. ಗ್ರಾಮದ 315 ಮನೆಗಳು ಈಗಾಗಲೆ ಶೌಚಾಲಯ ಹೊಂದಿದ್ದು.ಇನ್ನು 779 ಮನೆಗಳಿಗೆ ಶೌಚಾಲಯ ಕಟ್ಟಲು ಜಾಗವಿದ್ದು ಶಿಘ್ರವೇ ಶೌಚಾಲಯ ಕಟ್ಟಿಕೊಳ್ಳಲು ಬೇಕಾದ ನೆರವು ನೀಡಲು ಅಧಿಕಾರಿಗಳಿಗೆ ಸೂಚಿಸಿದ್ರು.ಗ್ರಾಮದ 150 ಮನೆಗಳಿಗೆ ಶೌಚಾಲಯ ಕಟ್ಟಿಕೊಳ್ಳಲು ಜಾಗವಿಲ್ಲದ ಕುಟುಂಬಗಳಿಗೆ ಸಾರ್ವಜನಿಕ ಶೌಚಗೃಹ ನಿರ್ಮಿಸಿಕೊಡುವ ಬರವಸೆ ನೀಡಿದ್ರು.

ಗ್ರಾಮ ವಾಸ್ತವ್ಯದ ನಿಮಿತ್ಯ ಉಚಿತ ಆರೋಗ್ಯ ಶಿಬಿರ ನಡೆಸಲಾಯಿತು,ನಂತರ ಗ್ರಾಮದ ಶುದ್ದ ಪರಿಸರಕ್ಕಾಗಿ ಜಿ.ಪಂ ಅದ್ಯಕ್ಷೆ ವೀಣಾ ಕಾಶಪ್ಪನವರ್ ನೇತೃತ್ವದಲ್ಲಿ 500ಕ್ಕೂ ಹೆಚ್ಚು ಸಸಿಗಳನ್ನ ನೆಡಲಾಯಿತು.

ಗ್ರಾಮದ 25ಕ್ಕೂ ಹೆಚ್ಚು ಗರ್ಭಿನಿ ಮಹಿಳೆಯರಿಗೆ ಜಿ.ಪಂ ಅಧ್ಯಕ್ಷೆ ವೀಣಾ ಕಾಶಪ್ಪನವರ್ ಸಾಮೂಹಿಕ ಸಿಮಂತ ಕಾರ್ಯ ಮಾಡಿ ಸ್ವತ: ಊಟಬಡಿಸಿ, ಪ್ರತಿ ಗರ್ಭಿನಿ ಮಹಿಳೆಗೂ ಸಸಿ ನೀಡಿ ಸಸಿನೆಡುವ ವಿನೂತನ ಕಾರ್ಯ ಮಾಡಿ ಜಿಲ್ಲೆಯ ಗಮನ ಸೆಳೆದ್ರು ಜಿ‌.ಪಂ ಅದ್ಯಕ್ಷೆ ವೀಣಾ ಕಾಶ ಪ್ಪನವರ್.

ಒಟ್ನಲ್ಲಿ ಜಿಲ್ಲಾ ಪಂಚಾಯತ ಅಧ್ಯಕ್ಷೆ ವೀಣಾ ಕಾಶಪ್ಪನವರ್ ಕಾರ್ಯವೈಕರಿಯನ್ನ ಜಿಲ್ಲೆ ಜನತೆ ಕೊಂಡಾಡುತ್ತಿದ್ದು.ಗ್ರಾಮ ವಾಸ್ತವ್ಯದ ಮೂಲಕ ಹೊಸ ಅಲೆಯನ್ನ ಸೃಷ್ಟಿಸಿರೋದಂತು ಸತ್ಯ.

LEAVE A REPLY

Please enter your comment!
Please enter your name here