ಜೀತಮುಕ್ತರಾದ ಕಾರ್ಮಿಕರು

0
201

ಕೋಲಾರ / ಬಂಗಾರಪೇಟೆ ; ಒರಿಸ್ಸಾ ರಾಜ್ಯದ 44 ಮಂದಿ ಜೀತ ಕಾರ್ಮಿಕರನ್ನು ಜಿಲ್ಲಾಡಳಿತ ರಕ್ಷಣೆ ಮಾಡಿ ತಮ್ಮ ಸ್ವಂತ ಊರಿಗೆ ಸೂಕ್ತ ಬಂದೋಬಸ್ತ್ ಮೂಲಕ ಪಾಟ್ನಾ ಎಕ್ಸ್ಕ್ರೆಸ್ ರೈಲಿನಲ್ಲಿ ಇಂದು ಬೆಳಿಗ್ಗೆ ಕಳುಹಿಸಿಕೊಡಲಾಯಿತು, ಮಾಲೂರುನ ಲಕ್ಕೂರು ಹೋಬಳಿಯಲ್ಲಿರುವ NBW ಹೆಸರಿನ ಶ್ರೀನಿವಾಸ್ ಎಂಬುವರ ಇಟ್ಟಿಗೆ ಕಾರ್ಖಾನೆ ಮೇಲೆ ಅಧಿಕಾರಿಗಳು ದಾಳಿ ನಡೆಸಿ ಜೀತದಾಳರಾಗಿದ್ದ 16 ಗಂಡಸರು, 16 ಹೆಂಗಸರು ಮತ್ತು 12 ಮಕ್ಕಳನ್ನು ಪತ್ತೆ ಹಚ್ಚಿ ರಕ್ಷಣೆ ಮಾಡಲಾಗಿದೆ, ಅವರನ್ನು ಇಂದು ಬೆಳಿಗ್ಗೆ ಬಂಗಾರಪೇಟೆ ರೈಲ್ವೆ ನಿಲ್ದಾಣದಿಂದ ಪಾಟ್ನಾ ರೈಲಿನಲ್ಲಿ ಕಳುಹಿಸಿಕೊಡಲಾಯಿತು, ಜಿಲ್ಲಾಧಿಕಾರಿ ತ್ರಿಲೋಕಚಂದ್ರ ಸೂಚನೆ ಮೇರೆಗೆ ಸಹಾಯಕ ಕಮೀಷನರ್ ಮಂಜುನಾಥ್, ತಹಸೀಲ್ದಾರ್ ಗಿರೀಶ್, ಉಪ ತಹಸೀಲ್ದಾರ್ ಸುರೇಶ್, ಆರ್.ಐ. ಕೆ.ಸಿ.ನಾರಾಯಣಸ್ವಾಮಿ, ಗ್ರಾಮಲೆಕ್ಕಿಗರಾದ ರಾಜೇಂದ್ರಪ್ರಸಾದ್ (ರಾಜು), ನಾಗೇಶ್, ಅಮರ್ ಶೇಖರ್, ರೂಪೇಶ್, ನಾಗರಾಜ್, ಕೋಲಾರ ಕಾರ್ಮಿಕ ಇಲಾಖೆ ನಿರಂಜನ್, ಬಾಲ ಕಾರ್ಮಿಕರ ಇಲಾಖೆ ಲಕ್ಷ್ಮೀನಾರಾಯಣ್, ಮಾಲೂರು ಲೋಕೇಶ್, ಈ ದಾಳಿಯಲ್ಲಿ ಭಾಗವಹಿಸಿದ್ದರು.ಬಂಗಾರಪೇಟೆ ರೈಲ್ವೆ ಪಿಎಸ್ಐ ಕೃಷ್ಣಪ್ಪ, ಆರ್ಪಿಎಫ್ ಸಿಬ್ಬಂದಿ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದರು.

LEAVE A REPLY

Please enter your comment!
Please enter your name here