ಜೀವನದಲ್ಲಿ ಜಿಗುಪ್ಸೆ,ಆತ್ಮಹತ್ಯೆಗೆ ಶರಣು

0
471

ಚಿಕ್ಕಬಳ್ಳಾಪುರ/ಚಿಂತಾಮಣಿ:ಜೀವನದಲ್ಲಿ ಜಿಗುಪ್ಸೆಗೊಂಡ ಯುವಕನೊಬ್ಬ ಚಲಿಸುತ್ತಿದ್ದ ರೈಲಿಗೆ ತಲೆಯೊಡ್ಡಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. ಮೃತ ಯುವಕನನ್ನು ಚಿಂತಾಮಣಿ ತಾಲ್ಲೂಕಿನ ಗೋಪಸಂದ್ರ ಗ್ರಾಮದ ಶಿವಕುಮಾರ್(25) ಎಂದು ತಿಳಿದುಬಂದಿದೆ.

ಚಿಂತಾಮಣಿ ತಾಲ್ಲೂಕಿನ ಮಾಡಿಕೆರೆ ಕ್ರಾಸ್ ಸಮೀಪದ ರೈಲು ಹಳಿ ಬಳಿ ಚಿಕ್ಕಬಳ್ಳಾಪುರ- ಕೋಲಾರ ಪ್ಯಾಸೆಂಜರ್ ರೈಲಿನಡಿ ಯುವಕ ತಲೆಯೊಡ್ಡಿದ್ದು, ರೈಲು ಹರಿದ ಪರಿಣಾಮ ಯುವಕ ಮೃತಪಟ್ಟಿದ್ದಾನೆ. ಮೃತ ಶಿವಕುಮಾರ್ ಮದುವೆ ಆಗಿ ಆರು ತಿಂಗಳು ಆಗಿದೆ ಎನ್ನಲಾಗಿದೆ. ಹಲವು ದಿನಗಳಿಂದ ಮಾನಸಿಕವಾಗಿ ಅಸ್ವಸ್ಥನಾಗಿದ್ದನೆಂದು ಹೇಳಲಾಗುತ್ತಿದೆ.

ಸ್ಥಳಕ್ಕೆ ರೈಲ್ವೆ ಪೊಲೀಸರು ಭೇಟಿ ನೀಡಿ ಪರಶೀಲನೆ ನಡೆಸಿದ್ದಾರೆ.

LEAVE A REPLY

Please enter your comment!
Please enter your name here