ಜೆಡಿಎಸ್ ಪಕ್ಷದ ಬೂತ್ ಕಮಿಟಿ ಪೂರ್ವಭಾವಿ ಸಭೆ

0
154

ಮಂಡ್ಯ/ಮಳವಳ್ಳಿ:  ರೈತ ಪರ ನಿಂತಿರುವ ಮಾಜಿ ಮುಖ್ಯಮಂತ್ರಿ ಹೆಚ್‌.ಡಿ ಕುಮಾರಸ್ವಾಮಿ ರವರಿಂದ ಮುಂದಿನ ಚುನಾವಣೆಯಲ್ಲಿ ಅಧಿಕಾರ ತಪ್ಪುತ್ತೆ ಎನ್ನುವ ದೃಷ್ಟಿಯಿಂದ     ಕಾಂಗ್ರೇಸ್  ಸಕಾ೯ರ ಕುಮಾರಣ್ಣ ಜೈಲ್ ಗೆ ಕಳುಹಿಸುವ ಹುನ್ನಾರ ನಡೆದಿತ್ತು ಎಂದು ಲೋಕಸಭಾ ಸದಸ್ಯ ಸಿ.ಎಸ್ ಪುಟ್ಟರಾಜು ತಿಳಿಸಿದರು.           ಮಳವಳ್ಳಿ ಪಟ್ಟಣದ ರೈತ ಸಮುದಾಯಭವನದಲ್ಲಿ ಜೆಡಿಎಸ್ ಪಕ್ಷದ ಬೂತ್ ಕಮಿಟಿ ರಚನೆಯ ಪೂರ್ವಭಾವಿ ಸಭೆಯನ್ನು ಉದ್ಘಾಟಿಸಿ ಮಾತನಾಡಿ,  ಮುಂದಿನ ಚುನಾವಣೆಯಲ್ಲಿ 125 ಕ್ಷೇತ್ರದಲ್ಲಿ ಗೆದ್ದು ಜೆಡಿಎಸ್ ಅಧಿಕಾರಕ್ಕೆ ಬಂದು ಕುಮಾರಣ್ಣ ಮುಖ್ಯಮಂತ್ರಿ ಯಾಗುವುದು ಖಚಿತ ಎಂದರು. ಇದನ್ನು ಮನಗೊಂಡ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷ ತಂತ್ರಗಳನ್ನು ರೂಪಿಸುತ್ತಿದ.್ದು .ಯಾವ ತಂತ್ರವೂ ನಡೆಯುವುದಿಲ್ಲ . ಇದಲ್ಲದೆ ಈ ಕ್ಷೇತ್ರದ ಶಾಸಕ ನರೇಂದ್ರ ಸ್ವಾಮಿರವರು ನಮ್ಮ ಕಾರ್ಯಕರ್ತರ ಮೇಲೆ ಕೇಸುಗಳನ್ನು ಹಾಕಿಸಿ ಬೆದರಿಕೆ ಹೂಡುತ್ತಿದ್ದಾರೆ ಎನ್ನುವುದು ಕೇಳಿಬರುತ್ತಿದ್ದು  ಇನ್ನೂ ಮುಂದೆ ಅವರ ಆಟ ನಡೆಯದು ಎಂದು ತಿಳಿಸಿದರು.   ಇದೇ ಸಂದರ್ಭದಲ್ಲಿ ಮಾಜಿ ಶಾಸಕ ಡಾ.ಕೆ ಅನ್ನದಾನಿ ಮಾತನಾಡಿ. ಮುಂದಿನ ಚುನಾವಣೆ ದೃಷ್ಟಿಯಿಂದ ಜನರ ಮನಗೆಲ್ಲಲು   ಮುಖ್ಯಮಂತ್ರಿ ಯನ್ನು ಕರೆಸಿ  ಸಾವಿರ ಕೋಟಿ ಯೋಜನೆ ಶಂಕುಸ್ಥಾಪನೆ ಹಾಗೂ ಉದ್ಘಾಟಿಸಿ ದರು ಇದು ಗಿಮಿಕ್ ಅಷ್ಟೆ,   593 ಕೋಟಿ ಪೂರಿಗಾಲಿ ಹನಿ ನೀರಾವರಿ ಯೋಜನೆ ಬೋಗಸ್ ಯಾಗಿದ್ದು ಈ ಯೋಜನೆಗೆ   ಕಾವೇರಿ   ಟ್ರಿಬಿನಲ್ ಅನುಮತಿ ನೀಡಲು ಬಿಡುವುದಿಲ್ಲ.. ಎಂದು ತಿಳಿಸಿದರು   ಇದೇ ಸಂದಭ೯ದಲ್ಲಿ ಕಾಂಗ್ರೆಸ್ ಪಕ್ಷ ತೊರೆದು ಜೆಡಿಎಸ್ ಪಕ್ಷ ಸೇರಿದರು.   ಸಭೆಯಲ್ಲಿ ವಿಧಾನ ಪರಿಷತ್ತು ಉಪಸಭಾಪತಿ ಮರಿತಿಬ್ಬೇಗೌಡ, ವಿಧಾನಪರಿಷತ್ ಸದಸ್ಯ ಕೆ.ಟಿ ಶ್ರೀಕಂಠೇಗೌಡ, ಜಿಲ್ಲಾಧ್ಯಕ್ಷ ಡಿ.ರಮೇಶ್. ತಾಲ್ಲೂಕು ಅಧ್ಯಕ್ಷ ಹಾಗೂ ಜಿ.ಪಂ ಸದಸ್ಯ ರವಿ . ಸೇರಿದಂತೆ ಮತ್ತಿತ್ತರರು ಇದ್ದರು

LEAVE A REPLY

Please enter your comment!
Please enter your name here