ಜೆಡಿಎಸ್ ಪತ್ರಿಕಾಗೋಷ್ಠಿ

0
182

ಬೆಂಗಳೂರು ಗ್ರಾಮಾಂತರ/ದೊಡ್ಡಬಳ್ಳಾಪುರ: ರಾಜ್ಯಮಟ್ಟದ ಜೆಡಿಎಸ್ ಪಕ್ಷದ ವತಿಯಿಂದ ದಿನಾಂಕ 1 ರಂದು ದಾವಣಗೆರೆಯಲ್ಲಿ ಹಮ್ಮಿಕೊಂಡಿರುವ ಸಮಾವೇಶ ಶ್ರೀ ಮಹರ್ಷಿ ವಾಲ್ಮೀಕಿ ಜನತೋತ್ಸವದ ಪೂರ್ವಸಿದ್ದತೆಯ ಪತ್ರಿಕಾಗೋಷ್ಠಿ ನಗರದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಪತ್ರಕಾಗೋಷ್ಠಿಯಲ್ಲಿ ಮಾತನಾಡಿದ ತಾಲೂಕು ಅಧ್ಯಕ್ಷ ಹೆಚ್,ಜಿ ವಿಜಯಕುಮಾರ್ ರಾಜ್ಯದ ಹೃದಯಭಾಗವಾದ ದಾವಣಗೆರೆಯಲ್ಲಿ ಸಮಾವೇಶ ಹಮ್ಮಿಕೊಂಡಿರುವ ಉದ್ದೇಶ ರಾಜ್ಯದಲ್ಲಿನ ಸಮಸ್ತ ವಾಲ್ಮೀಕಿಜನತೆ ಸಮಾವೇಶದಲ್ಲಿ ಭಾಗವಹಿಸಿ, ವಾಲ್ಮೀಕಿ ಸಮುದಾಯವನ್ನು ಎಸ್ಟಿ ಪಂಗಡಕ್ಕೆ ಸೇರ್ಪಡೆಗೊಳಿಸಿದ ಜೆಡಿಎಸ್ ಪಕ್ಷದ ವರಿಷ್ಠರು,ಮಾಜಿ ಪ್ರಧಾನಿ ದೇವೇಗೌಡರಿಗೆ ಗೌರವಸಲ್ಲಿಸುವಂತಾಗ ಬೇಕು ಎಂದರು.ಪತ್ರಿಕಾಗೋಷ್ಠಿಯಲ್ಲಿ ತಾಲೂಕಿನ ಜೆಡಿಎಸ್ ಮುಖಂಡರು ಅನೇಕರು ಭಾಗವಹಿಸಿದರು.

ಇದೇ ಸಂಧರ್ಭದಲ್ಲಿ ಇತ್ತೀಚೆಗೆ ಯೋಜನಾ ಸದಸ್ಯ ರಾಗಿ ಆಯ್ಕೆಯಾಗಿರುವ ಜೆಡಿಎಸ್ ನಗರಸಭಾ ಸದಸ್ಯ ಪ್ರಕಾಶ್ ರನ್ನು ಸನ್ಮಾನಿಸಲಾಯಿತು.

LEAVE A REPLY

Please enter your comment!
Please enter your name here