ಜೋಡಿ ಎತ್ತು ಓಟದ ಸ್ಪರ್ಧೆ..

0
59

ಮಂಡ್ಯ/ಮಳವಳ್ಳಿ: ಚುಮುಚುಮು ಚಳಿ. ಚಳಿಯ ನಡುವೆ ಮೈ ಬಿಸಿ ಏರಿಸುವ ರೇಸಿಂಗ್. ರೈತರ ಕೂಗು, ಸಿಳ್ಳೆ, ಚಪ್ಪಾಳೆ.. ಆಹಾ… ಆ ಸ್ಪರ್ಧೆ ನೋಡುವುದೇ ಒಂದು ರೀತಿಯಲ್ಲಿ ರೋಮಾಂಚನಕಾರಿ.
ಗ್ರಾಮೀಣ ಕ್ರೀಡೆ ಜೋಡಿ ಎತ್ತು ಓಟದ ಸ್ಪರ್ಧೆಯೇ ಹಾಗೆ. ನೋಡುಗರ ಮೈ ಬಿಸಿ ಏರಿಸುವ ಸ್ಪರ್ಧೆ. ಸಾಮಾನ್ಯವಾಗಿ ಚಳಿ ಗಾಲದಲ್ಲಿ ಇಂತಹ ಸ್ಪರ್ಧೆಗಳು ಜಿಲ್ಲೆಯಲ್ಲಿ ನಡೆಯುತ್ತಿರುತ್ತವೆ.
ಇಂದು ಮಳವಳ್ಳಿ ತಾಲ್ಲೂಕಿನ ರಾಗಿಬೊಮ್ಮನ ಹಳ್ಳಿಯಲ್ಲಿ ರಾಜ್ಯಮಟ್ಟದ ಜೋಡಿ ಎತ್ತುಗಳ ಓಟದ ಸ್ಪರ್ಧೆ ರೈತರ ಮನ ತಣಿಸಿತು. ಗ್ರಾಮದ ಶ್ರೀಬಸವೇಶ್ವರ ಗೆಳಯರ ಬಳಗ ವತಿಯಿಂದ ಆಯೋಜನೆ ಮಾಡಿದ್ದ ಸ್ಪರ್ಧೆಯಲ್ಲಿ 32 ಜೊತೆ ಎತ್ತುಗಳು ಪಾಲ್ಗೊಂಡಿದ್ದವು.
ಮಳವಳ್ಳಿಯ ಮೈಸೂರು ರಸ್ತೆಯ ಬನಸಿರಿ ಕಲ್ಯಾಣ ಮಂಟಪದ ಎದುರಿನ ಜಮೀನಿನಲ್ಲಿ ನಡೆದ ಸ್ಪರ್ಧೆಯಲ್ಲಿ ಜಿಲ್ಲೆಯ ಹಲವು ಭಾಗಗಳಿಂದ ರೈತರು ಸ್ಪರ್ಧೆಗೆ ಹಸುಗಳೊಂದಿಗೆ ಆಗಮಿಸಿದ್ದರು. ಸ್ಪರ್ಧೆ ಆರಂಭವಾಗುತ್ತಿದ್ದಂತೆ ನೋಡುಗರಲ್ಲಿ ಕುತೂಹಲದ ಜೊತೆಗೆ ಯಾರು ಗೆಲ್ಲುತ್ತಾರೆ ಎಂಬ ಕಾತರವೂ ಕಾಣುತ್ತಿತ್ತು.
ಪ್ರತಿ ಭಾರಿಯೂ ಎರಡೆರಡು ಜೋಡಿಗಳನ್ನು ಸ್ಪರ್ಧೆಗೆ ಬಿಟ್ಟು ಮೊದಲು ಬಂದ ಜೋಡಿಯನ್ನು ಮುಂದಿನ ಸುತ್ತಿಗೆ ಆಯ್ಕೆ ಮಾಡಲಾಗುತ್ತಿತ್ತು.
ಪ್ರತಿ ಭಾರಿಯೂ ರೈತರ ಉತ್ಸಾಹ ಇಮ್ಮಡಿಗೊಳಿಸುತ್ತಿತ್ತು. ಸುಗ್ಗಿಗೂ ಮೊದಲ ಈ ಗ್ರಾಮೀಣ ಕ್ರೀಡೆ ರೈತರಿಗೆ ರೋಮಾಂಚನ ಮೂಡಿಸಿದರಲ್ಲಿ ಅನುಮಾನವೇ ಬೇಡ. ಕಾರ್ಯಕ್ರಮ ವನ್ನು ತಾ.ಪಂ ಅಧ್ಯಕ್ಷ ಆರ್. ಎನ್ ವಿಶ್ವಾಸ್ ಚಾಲನೆ ನೀಡಿದರು. ನಂತರ ಸ್ಪರ್ಧೆಗೆ ವಿವಿದ ಕಡೆಯಿಂದ 32 ಜೋಡಿಹಸಗಳು ಬಂದಿದ್ದು , ಈ ಸ್ಪರ್ಧೆಯನ್ನು ವೀಕ್ಷಿಸಲು ಸುತ್ತಮುತ್ತಲಿನ ಗ್ರಾಮದ ಜನರು ಆಗಮಿಸಿದ್ದರು.

LEAVE A REPLY

Please enter your comment!
Please enter your name here