ಝಾಲಾಜಿಕಲ್ ಪಾರ್ಕ್ನ ಲ್ಲಿ ಮೈಸೂರಿನ ಜಿಂಕೆ

0
167

ಬಳ್ಳಾರಿ/ಹೊಸಪೇಟೆ:ತಾಲ್ಲೂಕಿನ  ಕಮಲಾ ಪುರದ ಬಳಿ ನಿರ್ಮಾಣವಾಗುತ್ತಿರುವ ಅಟಲ್ ಬಿಹಾರಿ ವಾಜಪೇಯಿ ಝಾಲಾಜಿಕಲ್ ಪಾರ್ಕ್  ಮೈಸೂರು ಕೃಷ್ಣರಾಜೇಂದ್ರ ಮೃಗಾಲಯ ದಿಂದ ನೀಲಗಾಯ್ ಜಿಂಕೆಗಳನ್ನು ಕರೆ ತರುವಕಾರ್ಯ ಸದ್ದಿಲ್ಲದೇ ಸಾಗಿದ್ದು, ಸುರಕ್ಷಿತವಾಗಿ ಜಿಂಕೆಗಳನ್ನು ಗಾರ್ಡನ್‍ನಲ್ಲಿ ಬಿಡಲಾಯಿತು.

ಮೈಸೂರಿನಿಂದ ವಾಹನದಲ್ಲಿ ಕರೆ ತರಲಾಗಿದ್ದ ಚಿಂಕೆಗಳನ್ನು ಶಾಸಕ ಆನಂದಸಿಂಗ್,  ನೀಲಗಾಯ್ ಜಿಂಕೆಯ ಪ್ರವೇಶ ದ್ವಾರವನ್ನುತೆರೆಯುವ ಮೂಲಕ 5 ನೀಲ್‍ಗಾಯ್ ಜಿಂಕೆಗಳನ್ನು 80ಎಕರೆ ಪ್ರದೇಶದ ಜಿಂಕೆ ವನದಲ್ಲಿ  ಬಿಡಲಾಯಿತು. ನವಂಬರ್ ತಿಂಗಳಲ್ಲಿಹಂಪಿ ಉತ್ಸವದ ಸಂಧರ್ಭದಲ್ಲಿ ಶ್ರೀ ಅಟಲ್ ಬಿಹಾರಿ ವಾಜಪೇಯಿಝಾಲಾಜಿಕಲ್‍ಪಾರ್ಕನ್ನು, ಮುಖ್ಯಮಂತ್ರಿ ಸಿದ್ಧರಾಮಯ್ಯಅವರಿಂದ ಉದ್ಘಾಟನೆಗೊಳ್ಳಲಿದೆ. ಈ ಹಿನ್ನಲೆಯಲ್ಲಿಉದ್ಯಾನವನಕ್ಕೆ ವನ್ಯಜೀವಿಗಳನ್ನು ಕರೆ ತರಲಾಗುತ್ತಿದೆ.

ಕಮಲಾಪುರದ ಹೊರವಲಯದ ಬಿಳಿಕಲ್ಲು ಸುರಕ್ಷಿತ ಅರಣ್ಯಪ್ರದೇಶದ ಪಶ್ಚಿಮ ಭಾಗದ 149.51ಹೆಕ್ಟೇರ್ ಪ್ರದೇಶದಲ್ಲಿ ಬೃಹತ್ರಾಷ್ಟ್ರೀಯ ಉದ್ಯಾನವನ ತಲೆ ಎತ್ತಲಿದ್ದು, ಇದೀಗ ಪರಿಸರಪ್ರವಾಸೋದ್ಯಮಕ್ಕೆ ನಾಂದಿಯಾಗಲಿದೆ. ಕಳೆದ ತಿಂಗಳು ಬಳ್ಳಾರಿಮೃಗಾಯದಿಂದ 80 ಜಿಂಕೆ, 50 ಕೃಷ್ಣ ಮೃಗಗಳನ್ನು ಗಾರ್ಡನ್‍ಗೆಸ್ಥಳಾಂತರಿಸಲಾಗಿತ್ತು. ಈ ಪ್ರಾಣಿಗಳು ಇದೀಗ ಇಲ್ಲಿನ ಪರಿಸಕ್ಕೆಹೊಂದಿಕೊಳ್ಳುತ್ತಿವೆ. ಅಲ್ಲದೆ, ಕೇಂದ್ರ ಮೃಗಾಲಯದ ಪ್ರಾಧಿಕಾರವುನಾಲ್ಕು ಹುಲಿಗಳನ್ನು ಮೃಗಾಲಯದಲ್ಲಿ ಇರಿಸಿಕೊಳ್ಳುವ ಮಾಸ್ಟರ್ಪ್ಲಾನ್‍ಗೆ ಅನುಮೋದನೆ ನೀಡಿದ್ದು, ಮೈಸೂರು ಮತ್ತುಬನ್ನೇರುಘಟ್ಟ ಮೃಗಾಲಯಗಳು, ಕಮಲಾಪುರ ಮೃಗಾಲಯಕ್ಕೆಕಳಹಿಸಿಕೊಡಲು ಒಪ್ಪಿಗೆ ಸೂಚಿಸಿವೆ ಎಂದು ಗಾರ್ಡನ್ ಕಾರ್ಯನಿರ್ವಾಹಕ  ಅಧಿಕಾರಿ ಕೆ.ಪುರುಷೋತ್ತಮ ತಿಳಿಸಿದರು.ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸಾಂಬಶಿವಪ್ಪ, ವಲಯಅರಣ್ಯ ಸಂರಕ್ಷಣಾಧಿಕಾರಿ ರಮೇಶ ಗಾಣಿಗೇರಾ, ಸಹಾಯಕವಲಯ ಸಂರಕ್ಷಣಾಧಿಕಾರಿ ಪರಮೇಶ್ವರಯ್ಯ ಸ್ವಾಮಿ ಹಾಗೂಸಿಬ್ಬಂದಿ ಹಾಜರಿದ್ದರು

LEAVE A REPLY

Please enter your comment!
Please enter your name here