ಟಿಎಪಿಸಿಎಂಎಸ್ ಮಾರುಕಟ್ಟೆ ಗುದ್ದಲಿಪೂಜೆ.

0
171

ಮಂಡ್ಯ/ಮಳವಳ್ಳಿ: ರೈತರಿಗೆ ಅನುಕೂಲವಾದ ರೈತರ ಮಳಿಗಗೆಳನ್ನು ಸ್ಥಾಪಿಸಿ ಮುಕ್ತ ಮಾರುಕಟ್ಟೆ ಮಾಡಬೇಕು ಇದರಿಂದ ರೈತರು ಆರ್ಥಿಕ ವಾಗಿ ಸಬಲರಾಗಬಹುದು ಎಂದು ಶಾಸಕ ಪಿ.ಎಂ ನರೇಂದ್ರ ಸ್ವಾಮಿ ತಿಳಿಸಿದರು.

ಮಳವಳ್ಳಿ ಪಟ್ಟಣದ ಪೇಟೆ ಬೀದಿಯಲ್ಲಿರುವ ಟಿಎಪಿಸಿಎಂಎಸ್ ಮಾರುಕಟ್ಟೆ ಗುದ್ದಲಿಪೂಜೆ ಕಾಯ೯ಕ್ರಮ ವನ್ನು ನೇರವೇರಿಸಿ, ಮಾತನಾಡಿ, ಪೂರಿಗಾಲಿ ಏತ ಹನಿನೀರಾವರಿ ಯೋಜನೆಯನ್ನು ವಿಭಾಗದಲ್ಲಿ 500 ಎಕರೆ ವಿಭಾಗೀಯ ವಾಗಿ ಆಳವಡಿಸಿ ರೈತರಿಗೆ ಅನುಕೂಲವಾಗುತ್ತದೆ ಎಂದರು. ಟಿಎಪಿಸಿಎಂಎಸ್ ಇತ್ತೀಚಿಗೆ ಆಡಳಿತ ಆರ್ಥಿಕವಾಗಿ ಮುಂದುವರಿದಿದ್ದು, ಮುಂದಿನ ದಿನಗಳಲ್ಲಿ ರೈತರಿಗೆ ಅನುಕೂಲ ಮಾಡುವ ಕೆಲಸಕಾರ್ಯಗಳನ್ನು ಮಾಡುವಂತೆ ತಿಳಿಸಿದರು. ಕಾಯ೯ಕ್ರಮ ದಲ್ಲಿ ಡಿಸಿಸಿ ಬ್ಯಾಂಕ್ ಜಿಲ್ಲಾಧ್ಯಕ್ಷ ಹರೀಶ್. ಟಿಎಪಿಸಿಎಂಎಸ್ ಅಧ್ಯಕ್ಷ ಚೌಡೇಶ್,ಉಪಾಧ್ಯಕ್ಷ ಬಸವರಾಜು, ತಾ.ಪಂ ಅಧ್ಯಕ್ಷ ಆರ್.ಎನ್ ವಿಶ್ವಾಸ್, ಉಪಾಧ್ಯಕ್ಷ ಮಾಧು. ಪುರಸಭಾಧ್ಯಕ್ಷ ರಿಯಾಜಿನ್ , ಎಪಿಎಂಸಿ ಅಧ್ಯಕ್ಷ ಅಂಬರೀಶ್, ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ವೆಂಕಟರಾಜು,ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ರಾದ ದೇವರಾಜು, ಪುಟ್ಟಸ್ವಾಮಿಗೌಡ,ಕೆಂಪಯ್ಯ ಸೇರಿದಂತೆ ಮತ್ತಿತ್ತರರು ಇದ್ದರು

LEAVE A REPLY

Please enter your comment!
Please enter your name here