ಟಿಕೆಟ್​ಗಾಗಿ ಓಡಾಡುತ್ತಿರುವ ಸ್ವಾಮೀಜಿ..!?

0
116

ಬಾಗಲಕೋಟೆ:ರಾಜ್ಯದಲ್ಲಿ ಬಿಜೆಪಿಯಿಂದ ಸ್ವಾಮೀಜಿಗಳಿಗೆ ಟಿಕೆಟ್​ ನೀಡುವ ಚಿಂತನೆ ನಡೆದಿರೋ ಬೆನ್ನಲ್ಲೆ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿರೋ ಸ್ವಾಮೀಜಿಯೊಬ್ಬರು ಇದೀಗ ದಿಢೀರ ಅಂತ ಟಿಕೆಟ್​ಗಾಗಿ ಓಡಾಡುತ್ತಿದ್ದು, ಸಾಲದ್ದಕ್ಕೆ ಮುಂಬೈ ಕರ್ನಾಟಕ ಪ್ರವಾಸದ ವೇಳೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರನ್ನು ಭೇಟಿಯಾಗಲು ಮುಂದಾಗಿದ್ದಾರೆ. ಹೌದು. ಅವರೇ ಬಾಗಲಕೋಟೆ ಜಿಲ್ಲೆಯ ಗದ್ದನಕೇರಿಯ ರಾಮಾರೂಢ ಮಠದ ಸ್ವಾಮಿಜಿ. ರಾಮಾರೂಢ ಸ್ವಾಮೀಜಿ ಭಕ್ತರನ್ನ ಕಟ್ಟಿಕೊಂಡು ಕಳೆದ ನಾಲ್ಕೈದು ತಿಂಗಳಿಂದ ಬೀಳಗಿ ವಿಧಾನ ಸಭಾ ಮತಕ್ಷೇತ್ರದಲ್ಲಿ ಬಿರುಸಿನ ಪ್ರಚಾರವನ್ನ ಕೈಗೊಂಡಿದ್ರು. ಸಾಲದ್ದಕ್ಕೆ ಬಿಜೆಪಿ ಪಕ್ಷದಿಂದ ಟಿಕೆಟ್ ಕೇಳೋಕೆ ಮುಂದಾಗಿದ್ರು. ಈ ಮಧ್ಯೆ ಟಿಕೆಟ್​ ನೀಡುವಂತೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ರಾಜ್ಯಾಧ್ಯಕ್ಷ ಯಡಿಯೂರಪ್ಪ, ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಸೇರಿದಂತೆ ಅನೇಕರಿಗೆ ಮನವಿ ಮಾಡಿ ಪತ್ರ ಬರೆದಿದ್ರು. ಆದ್ರೆ ಬಿಜೆಪಿ ಹೈಕಮಾಂಡ್​ ರಾಜ್ಯದಲ್ಲಿ ಸ್ವಾಮೀಜಿಗಳಿಗೆ ಟಿಕೆಟ್ ನೀಡಲು ಮುಂದಾದ ಬೆನ್ನಲ್ಲೆ  ರಾಮಾರೂಢ ಸ್ವಾಮೀಜಿ ಪ್ರತಿಕ್ರಿಯಿಸಿದ್ದು, ತಾವು ಈಗಲೂ ಬಿಜೆಪಿ ಪಕ್ಷದ ಆಕಾಂಕ್ಷಿ ಎಂದು ಹೇಳಿದ್ದಾರೆ. ಅತ್ತ ಜೆಡಿಎಸ್​ ಟಿಕೆಟ್ ನೀಡುವ ಭರವಸೆ ನೀಡಿದ್ರು ನೀಡಲಿಲ್ಲ, ಮೇಲಾಗಿ ಜೆಡಿಎಸ್​ ಪಕ್ಷವನ್ನೂ ತಾವು ಸೇರಿರಲಿಲ್ಲ ಎಂದಿರೋ ಸ್ವಾಮೀಜಿ, ಇದೀಗ ಬಿಜೆಪಿ ಪಕ್ಷದವ್ರು ಟಿಕೆಟ್​ ನೀಡಬಹುದು ಅನ್ನೋ ಲೆಕ್ಕಾಚಾರದಲ್ಲಿದ್ದಾರೆ. ಹೀಗಾಗಿ ಒಂದು ವಾರಗಳ ಕಾಲ ಬಿಜೆಪಿ ನಡೆಯನ್ನ ಕಾಯ್ದು ನೋಡಲು ರಾಮಾರೂಢ ಸ್ವಾಮಿಜಿ ಮುಂದಾಗಿದ್ದು, ಸಾಲದ್ದಕ್ಕೆ ಎಪ್ರಿಲ್ 3ರಂದು ಬಾಗಲಕೋಟೆ ಜಿಲ್ಲೆಗೆ ಭೇಟಿ ನೀಡಲಿರುವ ಅಮಿತ್ ಶಾ ಅವರನ್ನ ಭೇಟಿಯಾಗಿ ಟಿಕೆಟ್​ಗಾಗಿ ಮನವಿ ಮಾಡಲು ಸಿದ್ದರಾಗಿದ್ದು, ಇಷ್ಟಾಗಿಯೂ ಒಂದೊಮ್ಮೆ ಬಿಜೆಪಿ ಟಿಕೆಟ್​ ನೀಡದೇ ಹೋದರೆ ಪಕ್ಷೇತರರಾಗಿ ಸ್ಪರ್ಧೆ ಮಾಡೋದು ಅನಿವಾರ್ಯ ಅಂತ ಸ್ವಾಮಿಜಿ ಹೇಳಿದ್ರು.

ಬೈಟ್:- ಪರಮ ರಾಮಾರೂಢ ಸ್ವಾಮಿಜಿ (ಬಿಜೆಪಿ ಟಿಕೆಟ್ ಆಕಾಂಕ್ಷಿ)

LEAVE A REPLY

Please enter your comment!
Please enter your name here