ಟಿಕೆಟ್ ತಂದವರ ಗೆಲುವಿಗೆ ದುಡಿಯುವೆ..

0
510

ಚಿಕ್ಕಬಳ್ಳಾಪುರ/ಚಿಂತಾಮಣಿ:-ಜಾತ್ಯತೀತ ಜನತಾದಳದ ತಾಲ್ಲೂಕು ಘಟಕದಲ್ಲಿ ಯಾವುದೇ ಭಿನ್ನ ಮತವಿಲ್ಲ ,ಪಕ್ಷದ ಹೈಕಮಾಂಡ್ ಯಾರಿಗೆ ಬಿ ಫಾರಂ ಕೊಡುತ್ತದೆಯೋ ಅವರಿಗೆ ನಾವುಗಳು ದುಡಿಯುವುದಾಗಿ ತಾಲ್ಲೂಕು ಜೆಡಿಎಸ್ ಅಧ್ಯಕ್ಷ ತಳಗವಾರ ಟಿ.ಎನ್ ರಾಜಗೋಪಾಲ್ ಹೇಳಿದರು.

ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ನಾನು ನಮ್ಮ ಬೆಂಬಲಿಗರು ಜೆಡಿಎಸ್ ಪಕ್ಷಕ್ಕೆ ಸಂಪೂರ್ಣ ನಿಷ್ಠೆಯಾಗಿದ್ದೇವೆ. ಶಾಸಕ ಜೆ.ಕೆ ಕೃಷ್ಣಾ ರೆಡ್ಡಿ ಯವರು ಬಟ್ಲಹಳ್ಳಿ ಕಾರ್ಯಕ್ರಮದಲ್ಲಿ ಪರ್ಯಾಯ ಅಭ್ಯರ್ಥಿ ನೇಮಕದ ಬಗ್ಗೆ ಮಾಡಿರುವ ಪ್ರಸ್ತಪದ ಬಗ್ಗೆ ಗಮನ ಸೆಳೆದಾಗ ಯಾರೇ ಜೆಡುಎಸ್ ಪಕ್ಷದ ಬಿ ಫಾರಂ ತೆಗೆದು ಕೊಂಡು ಬಂದರೆ ಅವರಿಗೆ ಕಾಯಾ ,ವಾಚಾ ,ಮನಸಾ ಕೆಲಸ ಮಾಡುವುದಾಗಿ ಹೇಳಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ರವೀಂದ್ರ ಗೌಡ ,ಉಪಾಧ್ಯಕ್ಷ ದಿನ್ನಮಿಂದಪಲ್ಲಿ ಬೈರಾರೆಡ್ಡಿ ,ತಾ ಪಂಚಾಯತಿ ಸದಸ್ಯರಾದ ಸಂತೇಕಲ್ಲಹಳ್ಳಿ ನಾರಾಯಣಸ್ವಾಮಿ ,ಮುರಗಮಲ್ಲ ರಾಜಣ್ಣ ,ನಗರಸಭಾ ಸದಸ್ಯ ಸಾದಪ್ಪ ,ಕೈವಾರ ಸುಬ್ಬಾರೆಡ್ಡಿ ಬನಹಳ್ಳಿ ರವಿ ಮತ್ತಿತರರು ಉಪಸ್ಥಿತಿಯಿದರು.

LEAVE A REPLY

Please enter your comment!
Please enter your name here