ಟಿಪ್ಪುಜೀವನ ಶೈಲಿ ಅಳವಡಿಸಿಕೊಳ್ಳಿ ಎಂದು ಸಲಹೆಕೊಟ್ಟ ಗುತ್ತೇದಾರ..

0
387

ಕಲಬುರ್ಗಿ/ ಅಫಜಲಪೂರ : ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಹಜರತ್ ಟಿಪ್ಪು ಸುಲ್ತಾನ್ ಜಯಂತಿಯಲ್ಲಿ ಜೆಸ್ಕಾಂ ನಿರ್ದೇಶಕ ಪಪ್ಪುಪಟೇಲ ಅವರು ರಾಜ್ಯ ಗೃಹ ಮಂಡಳಿ ಅಧ್ಯಕ್ಷ ಮತ್ತು ಶಾಸಕ ಮಾಲಿಕಯ್ಯ ಗುತ್ತೇದಾರ ಅವರಿಗೆ ಟಿಪ್ಪು ಟೋಪಿ ಹಾಗೂ ಖಡ್ಗವನ್ನು ನೀಡಿ ಸಮ್ಮಾನಿಸಿದ್ದರು .

ನಂತರ ಮಾತನಾಡಿದ ಮಾಲಿಕಯ್ಯ ಗುತ್ತೇದಾರ ಮೈಸೂರು ಹುಲಿ ಟಿಪ್ಪು ಸುಲ್ತಾನ್ ಒಬ್ಬ ಅಪ್ರತಿಮ ದೇಶ ಭಕ್ತ, ಪರಕೀಯರ ದಾಸ್ಯಕ್ಕೆ ಮಣಿಯದೆ ವೀರಾವೇಶದಿಂದ ಹೋರಾಟ ಮಾಡಿ ರಣಾಂಗಣದಲ್ಲಿ ವೀರಮರಣ ಹೊಂದಿದ್ದಾರೆ. ಅಂಥವರ ವ್ಯಕ್ತಿತ್ವದ ಬಗ್ಗೆ ಬಿಜೆಪಿ ನಾಯಕರು ಕೀಳಾಗಿ ಮಾತನಾಡುತ್ತಿದ್ದಾರೆ .ಅವರೇ ಟಿಪ್ಪು ಸುಲ್ತಾನ್ ಟೋಪಿ ಧರಿಸಿ, ಖಡ್ಗವನ್ನು ಕೈಯಲ್ಲಿ ಹಿಡಿದವರು ಇಂಥವರ ಮುಂದಿನ ಚುನಾವಣೆ ಯಲ್ಲಿ ಮತದಾರರು ತಕ್ಕ ಪಾಠ ಕಲಿಸುತ್ತಾರೆ ಎದ್ದರು.

ನಂತರ ಸಾನ್ನಿಧ್ಯ ವಹಿಸಿದ್ದ ವಿಶ್ವರಾಧ್ಯ ಮಳೇಂದ್ರ ಶಿವಾಚಾರ್ಯರು. ತಹಶೀಲ್ದಾರ್ ಇಸ್ಮಾಯಿಲ್ ಮುಲ್ಕಿ. ಸುಭಾಷ್ ನಾಯ್ಕೋಡಿ.ಮುನೀರ್ ಪಟೇಲ ಮಾತನಾಡಿದ್ದರು.

ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಶರಣಪ್ಪ ಗುಡ್ಡಡಗಿ.ತಾಲ್ಲುಕು ಪಂಚಾಯಿತಿ ಅಧ್ಯಕ್ಷೆ ರುಕ್ಮಿಣಿ ಜಮಾದಾರ.ಟಿಪ್ಪು ಸುಲ್ತಾನ್ ಸಂಘದ ಅಧ್ಯಕ್ಷ ಸೋಹೇಲ್ ಪಟೇಲ. ಸಲಾವುದ್ದಿನ್ ಪಾಶಾ. ಟಿಪ್ಪು ಕ್ರಾಂತಿ ಸೇನಾ ಅದ್ಯಕ್ಷ ಜವಿುಲ್ ಗೋಡಿ. ಬಿ ವೈ ಪಾಟೀಲ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಶ್ವನಾಥ ರೇವೂರ. ಕರವೇ ಜಿಲ್ಲಾ ಅಧ್ಯಕ್ಷ ಶಿವಕುಮಾರ್ ನಾಟೀಕಾರ. ಶಿವಪುತ್ರಪ್ಪ ಕರೂರ. ಮಂಜೂರ ಅಹ್ಮದ್ ಅಗರಖೇಡ ಇತರರು ಇದ್ದರು. ಟಿಪ್ಪು ಜಯಂತಿ ಹಿನ್ನೆಲೆಯಲ್ಲಿ ಪೋಲಿಸ ಅಧೀಕ್ಷಕರಾದ ಜೆ.ಎಚ್ ಇನಾಮದಾರ. ಪಿಎಸ್ಐ ಸಂತೊಷ ರಾಠೊಡ ನೇತೃತ್ವದಲ್ಲಿ ಪೋಲಿಸ ಬಿಗಿ ಬಂದೋಬಸ್ತ್ ಮಾಡಲಾಗಿತ್ತು.

LEAVE A REPLY

Please enter your comment!
Please enter your name here