ಟಿಪ್ಪು ಜಯಂತಿ ಪೂರ್ವಭಾವಿ ಸಭೆ

0
310

ಚಿಕ್ಕಬಳ್ಳಾಪುರ / ಶಿಡ್ಲಘಟ್ಟ : ಟಿಪ್ಪು ಜಯಂತಿ ಹಿನ್ನೆಲೆ ಪೂರ್ವಭಾವಿ ಶಾಂತಿ ಸಭೆ ಕೆಲಕಾಲ ಗದ್ದಲ ಸಭೆಯಲ್ಲೂ ಯಶಸ್ವಿಯಾಯಿತುl

ಸರ್ಕಾರ ಆದೇಶದಂತೆ ನಿಗಧಿತ ಸಮಯಕ್ಕೆ ಕಾರ್ಯಕ್ರಮ ಮಾಡಲು ತಹಶೀಲ್ದಾರ್ ಅಜಿತ್ ಕುಮಾರ್ ರೈ ಸೂಚನೆ

ಮುಸ್ಲಿಂ ಬಾಂಧವರು ಸಭೆಯನ್ನು 3 ಭಾರಿ ಭಹಿಷ್ಕರಿಸಿ ಸಭೆಯಿಂದ ಹೊರ ನಡೆಯಲು ಮುಂದಾದ ಘಟನೆ

ವೇದಿಕೆ ಕಾರ್ಯಕ್ರಮ ಮಧ್ಯಾಹ್ನ 2 ಗಂಟೆಗೆ ಮಾಡಲು ಮಸೀದಿಗಳ ಹಾಗೂ ಸಮುದಾಯ ಮುಖಂಡರು ಒಮ್ಮತದಿಂದ ಒತ್ತಾಯ

ಮೆರವಣಿಗೆ, ಬಂಟಿಂಗ್ಸ್ ,ಬ್ಯಾನರ್ ಸರ್ಕಾರಿ ಆದೇಶದಂತೆ ನಿಷೇಧ

ಮಸೀದಿಗಳಲ್ಲಿ ಶುಕ್ರವಾರ ಪ್ರಾರ್ಥನೆ ಮಾಡಿದ ಬಳಿಕ ಜಯಂತಿ ಮಾಡಲು ಮನವಿ

ಸರ್ಕಾರ ಆದೇಶವನ್ನು ಉಲ್ಲಂಗಿಸದೆ ಎಲ್ಲರೂ ಸಹಕರಿಸಿ ಎಂದು ತಹಶೀಲ್ದಾರ್ ಮನವಿ ಮಾಡಿದರು. ಕೊನೆಗೆ ಹಿರಿಯ ಮುಖಂಡರು ಹಾಗೂ ಮಸೀದಿಗಳ ಮುಖಂಡರು ಎಲ್ಲರನ್ನು ಸಮಾದಾನ ಪಡಿಸಿ ಕಾರ್ಯಕ್ರಮಕ್ಕೆ ಒಮ್ಮತದಿಂದ ಸಂಪೂರ್ಣವಾಗಿ ಸಹಕಾರ ನೀಡಿ ಭಾಗವಹಿಸುತ್ತೇವೆಂದು ತಿಳಿಸಿದ ನಂತರ ಸಭೆ ಮುಕ್ತಾಯಗೊಳಿಸಿದರು.

ತಹಶೀಲ್ದಾರ್ ಅಜೀತ್ ಕುಮಾರ್ ರೈ ಅಧ್ಯಕ್ಷತೆಯಲ್ಲಿ ಗ್ರಾಮಾಂತರ ಠಾಣೆಯಲ್ಲಿ ನಡೆದ ಶಾಂತಿ ಸಭೆಯಲ್ಲಿ ಚಿಂತಾಮಣಿ ಉಪವಿಭಾಗದ ಡಿವೈಎಸ್ಪಿ ಎಲ್. ನಾಗೇಶ್ , ನಗರಸಭೆ ಆಯುಕ್ತ ಚಲಪತಿ, ಆರಕ್ಷಕ ವೃತ್ತ ನಿರೀಕ್ಷಕರಾದ ಬಿ.ಸಿದ್ದರಾಜು ಹಾಗೂ ಗ್ರಾಮಾಂತರ ಠಾಣೆಯ ಅಧಿಕಾರಿಗಳಾದ ಪ್ರದೀಪ್ ಪೂಜಾರಿ ಹಾಗೂ ವಿಜಯರೆಡ್ಡಿ ಭಾಗವಹಿಸಿದ್ದರು

ಸಭೆಗೆ ಮುಸ್ಲಿಂ ಬಾಂಧವರು ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here