ಟಿಪ್ಪು ಜಯಂತಿ ವಿರೋಧಿಸಿ ಪ್ರತಿಭಟನೆ.

0
110

ಬೆಂಗಳೂರು ಗ್ರಾಮಾಂತರ/ದೊಡ್ಡಬಳ್ಳಾಪುರ: ತಾಲೂಕು ಕಛೇರಿ ವೃತ್ತದಲ್ಲಿ ಹಿಂದೂಪರ ಸಂಘಟನೆ ಗಳು,ಬಿಜೆಪಿ ಕಾರ್ಯಕರ್ತರು,ಹಿಂದು ಜಾಗರಣ ವೇದಿಕೆ ಹಾಗೂ ಭಜರಂಗದಳ ಟಿಪ್ಪು ಜಯಂತಿ ವಿರೋಧ ವ್ಯಕ್ತಪಡಿಸಿ ಕಪ್ಪು ಪಟ್ಟಿ ದರಿಸಿ ಪ್ರತಿಭಟನೆ ನಡೆಸಿದರು.

ಟಿಪ್ಪು ಒಬ್ಬ ಮತಾಂಧ ಆತನ ಜಯಂತಿ ಆಚರಣೆ ಸೂಕ್ತವಲ್ಲ ಅಬ್ದುಲ್ ಕಲಾಂ, ಸಂತ ಶಿಶುನಾಳ ಶರೀಫ, ಸಂತ ಕಬೀರ್ ರ ಜಯಂತಿಯನ್ನು ಆಚರಿಸಲಿ ಅದಕ್ಕೆ ನಮ್ಮ ಯಾವುದೇ ಅಭ್ಯಂತರವಿಲ್ಲ ಆದರೇ ಒಬ್ಬ ಹಿಂದೂ ವಿರೋದಿ ಕೊಲೆಗಡುಕನ ಜಯಂತಿ ಆಚರಣೆ ಯನ್ನು ರಾಜ್ಯ ಕಾಂಗ್ರೆಸ್ ಆಡಳಿತ ಅದ್ಯಾವ ಪುರುಷಾರ್ತಕ್ಕೆ ಆಚರಣೆಗೆ ತಂದಿದಿಯೋ ಗೊತ್ತಿಲ್ಲ, ಒಂದು ಅನುಮಾನ ಮಾತ್ರ ಸುಳ್ಳಲ್ಲ ಇದೆಲ್ಲೆ ಮುಸ್ಲೀಮ ರನ್ನು ಓಲೈಸಿ ಕಾಂಗ್ರೆಸ್ ಪಕ್ಷ ಮತಬ್ಯಾಂಕ್ ನಿರ್ಮಾಣ ಎಂದರು.

ತಹಶಿಲ್ದಾರ್ ಮುಖಾಂತರ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿದರು.ಈ ಸಂದರ್ಭದಲ್ಲಿ ಟಿಪ್ಪು ಜಯಂತಿ ಆಚರಣೆ ವಿರೋಧ ಸಮಿತಿ ಅಧ್ಯಕ್ಷ ಹೆಚ್.ಅಮರನಾಥ್, ಕೇಂದ್ರ ರೇಷ್ಮೆ ಮಂಡಳಿಯ ಅಧ್ಯಕ್ಷರಾದ ಕೆ.ಎಂ ಹನುಮಂತರಾಯಪ್ಪ ಬಿಜೆಪಿ ಪಕ್ಷದ ಜಿಲ್ಲಾ ಕಾರ್ಯದರ್ಶಿ ಪುಷ್ಪ ಶಿವಶಂಕರ್,ಬಿಜೆಪಿ ಯುವಮೋರ್ಚಾ ಜಿಲ್ಲಾಧ್ಯಕ್ಷ ಶಿವಶಂಕರ್ ಸೇರಿದಂತೆ ತಾಲೂಕಿನ ಎಲ್ಲಾ ಹಿಂದೂ ಜಾಗರಣಾ ವೇದಿಕೆ ಮತ್ತು ಭಂಜರಂಗದಳದ ಕಾರ್ಯಕರ್ತರು ಭಾಗಿಯಾಗಿದ್ದರು..

LEAVE A REPLY

Please enter your comment!
Please enter your name here