ಟಿ.ಡಿ.ಪಿ.ಪಕ್ಷದ ಮುಖಂಡ ಕಾರು ಅಪಘಾತದಲ್ಲಿ ಸಾವು…

0
331

ಬಳ್ಳಾರಿ:ಟಿ.ಡಿ.ಪಿ.ಪಕ್ಷದ ಮುಖಂಡ ಕಾರು ಅಪಘಾತದಲ್ಲಿ ಸಾವು-ರಾಜಕೀಯ ಚಟುವಟಿಕೆ ಮುಗಿಸಿಕೊಂಡು ಬರುವಾಗ ನಡೆದ ಘಟನೆ-ಆಂಧ್ರಪ್ರದೇಶದ ಕರ್ನೂಲು ಕ್ವಾಸಗಿ ಬಳಿ ನಡೆದ ಘಟನೆ-ಕುಮಾರಗೌಡ ಮೃತಪಟ್ಟವರು-ಇಂದು ಸಂಜೆ ಅಂತ್ಯ ಸಂಸ್ಕಾರ ಆಂಧ್ರಪ್ರದೇಶದ ಕರ್ನೂಲು ಜಿಲ್ಲೆ ಕ್ವಾಸಗಿ ಗ್ರಾಮದ ಬಳಿ ಟಿ.ಡಿ.ಪಿ.‌ಪಕ್ಷದ ನಾಯಕ ಹಾಗೂ ತುಂಗಭದ್ರಾ ಎಲ್ ಎಲ್ ಸಿ ಕಾಲುವೆ ಆಂಧ್ರಗಡಿಯ ಅಧ್ಯಕ್ಷ ಕುಮಾರಗೌಡ(46)ಕಾರು ಪಲ್ಟಿ ಯಾಗಿ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.

ಶ್ರೀ ಶೈಲಂದಿಂದ ರಾಜಕೀಯ ಚಟುವಟಿಕೆ ಮುಗಿಸಿಕೊಂಡು ವಾಪಸ್ಸು ಆದೋನಿಗೆ ಬರುವಾಗ ಸ್ಕಾರ್ಪಿಯೋ ವಾಹನ ಅತಿವೇಗದ ಪರಿಣಾಮ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದ್ದರಿಂದ ಮೃತಪಟ್ಟಿದ್ದು, ಚಾಲಕನ ಸ್ಥಿತಿ ಗಂಭೀರವಾಗಿದೆ.

ಮೃತ ಕುಮಾರಗೌಡ ತಂದೆ ಬಳ್ಳಾರಿಯಲ್ಲಿ ಶ್ರೀ ಮಂಜುನಾಥ ಕಾಟನ್ ಮರ್ಷೆಂಟ್ ಆಗಿ ಬ್ಯುಸಿನೆಸ್ ಮಾಡ್ತಿದ್ರು. ಇವರೂ ಸಹ ಕಾಟನ್ ಮರ್ಚೆಂಟ್ ಆಗಿದ್ದು, ಆಂಧ್ರದ ಆದೋನಿಯಲ್ಲಿ ವ್ಯಾಪಾರ ವಿಸ್ತರಿಸಿಕೊಂಡು, ಟಿಡಿಪಿ ಪಕ್ಷದ ಪ್ರಭಾವಿ ನಾಯಕರಾಗಿ ಪ್ರವರ್ಧಮಾನಕ್ಕೆ ಬೆಳೆಯುತ್ತಿದ್ದರು.

ಬಳ್ಳಾರಿ ತಾಲೂಕಿನ ಸಿಂಧಿಗೇರಿ-ಬೈಲೂರಿನಲ್ಲಿ ಬೀಗಸ್ಥನ ಮಾಡಿದ್ದರು.

ಇಂದು ಆದೋನಿಯಲ್ಲಿ ವೀರಶೈವ ಧರ್ಮದ ಸಂಪ್ರದಾಯದಂತೆ ಅವರ ಅಂತ್ಯಕ್ರಿಯೆ ನಡೆಯಲಿದ್ದು, ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸೇರಿದಂತೆ ಸಚಿವರು, ಟಿಡಿಪಿ ಪಕ್ಷದ ಮುಖಂಡರು ಪಾಲ್ಗೊಳ್ಳುವ ಸಾಧ್ಯತೆ ಇದೆ ಅಂತ ಹೇಳಲಾಗುತ್ತಿದೆ.

LEAVE A REPLY

Please enter your comment!
Please enter your name here