ಟೆಂಡರ್ ಕರೆಯುವಂತೆ ಒತ್ತಾಯಿಸಿ ಪ್ರತಿಭಟನೆ…!?

0
64

ಮಂಡ್ಯ/ ಮಳವಳ್ಳಿ : 14 ನೇ ಹಣಕಾಸು ಯೋಜನೆ ಕಾಮಗಾರಿಯ ಟೆಂಡರ್ ಹಾಗೂ ಜೆಟ್ಟಿಂಗ್ ಮತ್ತು ಸಕ್ಕಿಂಗ್ ಮಿಷನ್ ಟೆಂಡರ್ ಕರೆಯುವಂತೆ ಒತ್ತಾಯಿಸಿ ಕೆಲವು ಪುರಸಭೆ ಸದಸ್ಯರು ಮಳವಳ್ಳಿ ಪಟ್ಟಣದ ಪುರಸಭೆ ಮುಂದೆ ಪ್ರತಿಭಟನೆ ನಡೆಸಿದರು. ಪುರಸಭೆ ಸದಸ್ಯ ಗಂಗರಾಜೇ ಆರಸು ನೇತೃತ್ವದಲ್ಲಿ ಕೆಲವು ಪುರಸಭಾ ಸದಸ್ಯರು ಹಾಗೂ ಸಾರ್ವಜನಿಕರು ಪುರಸಭೆಯಲ್ಲಿ ಕಾಮಗಾರಿ ಕುಂಠಿತವಾಗಿದ್ದು, ಮಳವಳ್ಳಿ ಪಟ್ಟಣದ ಲ್ಲಿ ಎಸ್.ಸಿ. ಪಿ, ಹಾಗೂ ನಗರೋತ್ಥಾನ ಕಾಮಗಾರಿಗಳು ಪ್ರಾರಂಭಗೊಂಡು 8 ತಿಂಗಳು ಕಳೆದಿದ್ದರೂ ಕೆಲವಡೆ ಕಾಮಗಾರಿಯನ್ನೇ ಪ್ರಾರಂಭಸಿರುವುದಿಲ್ಲ ಹಾಗೂ ಕೆಲವಡೆ ಅರ್ಧಬರ್ಧ ಕೆಲಸ ಮಾಡಿ ನಿಲ್ಲಿಸಿದ್ದು, ಸಾರ್ವಜನಿಕರು ನಮಗೆ ಶಾಪ ಹಾಕುತ್ತಿದ್ದಾರೆ ಇದರ ಬಗ್ಗೆ ಧರಣಿ ಮಾಡುತ್ತೇವೆ ಎಂದು ಆರ್ಜಿ ಲಗತ್ತಿಸಿದ್ದರೂ ಸಹ ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ ಹಾಗೂ ಪಟ್ಟಣದಲ್ಲಿ ಒಳ ಚರಂಡಿ ವಿಭಾಗಕ್ಕೆ ಜೆಟ್ಟಿಂಗ್ ಹಾಗೂ ಸಕ್ಕಿಂಗ್ ಮಿಷನ್ ಗೆ ಸರ್ಕಾರದ ಮಟ್ಟದಲ್ಲಿ ಟೆಂಡರ್ ಕರೆಯುವಂತೆ ಮೂರು ತಿಂಗಳ ಹಿಂದೆ ಅನುಮೋದನೆ ನೀಡಿದ್ದರೂ ಸಹ ಟೆಂಡರ್ ಕರೆಯದೇ ಬೇಜವಾಬ್ದಾರಿತನ ತೋರುತ್ತಿದ್ದಾರೆ ಎಂದು ಆರೋಪಿಸಿದರು. ಪುರಸಭೆ ಸದಸ್ಯರ ಅವಧಿಯೂ ಮುಗಿಯುತ್ತಾ ಬಂದಿದ್ದು, ಕಾಮಗಾರಿ ಪ್ರಾರಂಭವಾಗಿಲ್ಲ ಈ ಕೂಡಲೇ ಕ್ರಮ ಕೈಗೊಳ್ಳಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿ ಕಚೇರಿಗಳ ಮುಂದೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ . ಪ್ರತಿಭಟನೆಯಲ್ಲಿ ಪುರಸಭಾ ಸದಸ್ಯರುಗಳಾದ ಗಂಗರಾಜೇಆರಸು, ಕಿರಣ್ ಶಂಕರ್, ಶಿವಕುಮಾರ್ , ಮಾರೇಹಳ್ಳಿ ಬಸವರಾಜು, ಮಾಜಿಸದಸ್ಯರಾದ ನಂಜುಂಡಯ್ಯ,ರಮೇಶ್, ಮಂಜು,ಸೇರಿದಂತೆ ಮತ್ತಿತ್ತರರು ಇದ್ದರು

LEAVE A REPLY

Please enter your comment!
Please enter your name here