ಟ್ರಾಕ್ಟರ್ ಚಕ್ರ ಹರಿದು ಮಹಿಳೆ ಸಾವು…

0
129

ಚಿಕ್ಕಬಳ್ಳಾಪುರ/ ಶಿಡ್ಲಘಟ್ಟ : ಟ್ರಾಕ್ಟರ್ ಚಕ್ರ ತಲೆಯ ಮೇಲೆ ಹರಿದು ಪಟ್ಟಣದ ಮಾರುತಿ ನಗರ ನಿವಾಸಿ ಅನುಸೂಯಮ್ಮ (45) ಸ್ಥಳದಲ್ಲಿ ಸಾವು.

ಮಾರುತಿ ನಗರದ ಮುನೇಶ್ವರ ದೇವಾಲಯ ಸಮೀಪ ಅಪಘಾತ ನಡೆದಿದ್ದು, ಬಣ್ಣ ಬಳಿಯುವ ಕೆಲಸ ಮಾಡುತ್ತಿದ್ದ ಮಾರುತಿ ನಗರದ ನಿವಾಸಿ ನಾಗರಾಜ ಎಂಬುವರ ಪತ್ನಿ ಎಂದು ಗುರುತಿಸಲಾಗಿದೆ. ಪ್ರತಿ ಶುಕ್ರವಾರ ಮುನೇಶ್ವರ ದೇವಾಲಯಕ್ಕೆ ಎಂದಿನಂತೆ ಇಂದು ನಡೆದುಕೊಂಡು ಹೋಗುವಾಗ ಟ್ರಾಕ್ಟರ್ ಚಾಲಕನ ಅಜಾಗುರುಕತೆಯಿಂದ ದುರಂತ ಸಂಭವಿಸಿದೆ ಎನ್ನಲಾಗಿದೆ.ಸ್ಥಳಕ್ಕೆ ಪೋಲಿಸರು ಆಗಮಿಸಿ, ಟ್ರಾಕ್ಟರ್ ವಶಪಡಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here