ಬೀದರ್/ಬಸವಕಲ್ಯಾಣ:ತಾಲೂಕಿನ ಘೋಟಾಳ ಗ್ರಾಮದ ಬಳಿ ಟ್ರ್ಯಾಕ್ಟರ್ ಪಲ್ಟಿಯಾಗಿ ಐದು ಜನರಿಗೆ ಗಂಭೀರಚಾಗಿ ಗಾಯವಾದ ಘಟನೆ ಜರುಗಿದೆ. ಗಾಯಾಳುಗಳೆಲ್ಲರು.ತಾಲೂಕಿನ ಗಡಿಗೆ ಹೊಂದಿಕೊಂಡಿರು ಮಹಾರಾಷ್ಟ್ರದ ಕೊರಳ್ಳಿ ಗ್ರಾಮದವರಾಗಿದ್ದು, ಗಾಯಗೊಂಡವರಲ್ಲಿ ಮೂವರ ಸ್ಥಿತಿ ಚಿಂತಾಜನಕವಾಗಿದೆ. ನಗರದ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಉಮರಗಾ ಆಸ್ಪತ್ರೆಗೆ ಸಾಗಿಸಲಾಗಿದೆ.ಕೆಂಪು ಕಲ್ಲು ತುಂಬಿದ ಟ್ರ್ಯಾಕ್ಟರ್ ಪಲ್ಟಿಯಾಗಿದ್ದು, ಟ್ರ್ಯಾಕ್ಟರ್ ನಲಿದ್ದ ಕಾರ್ಮಿಕರ ಮೇಲೆ ಕಲ್ಲುಗಳು ಬಿದ್ದಿವೆ. ಈ ಕುರಿತು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.