ಠಾಣೆಯ ಬೈಕುಗಳು ಬಹಿರಂಗ ಹರಾಜು.

0
275

ಚಿಕ್ಕಬಳ್ಳಾಪುರ/ಚಿಂತಾಮಣಿ ನಗರದ ನಗರ ಪೊಲೀಸ್ ಠಾಣೆಯಲ್ಲಿ ವಿವಿಧ ಪ್ರಕರಣ ಗಳಲ್ಲಿ ವಶಪಡಿಸಿಕೊಂಡಿದ್ದ ವಿವಿಧ ಕಂಪನಿಯ 31 ಬೈಕುಗಳು ,1 ಎಸ್ಟೀಮ್ ಕಾರು ,ಮತ್ತು 3 ಲಾರಿಗಳನ್ನು ನ್ಯಾಯಾದ ಅದೇಶ ಮೇರಿಗೆ ನಗರದ ಪೊಲೀಸ್ ಠಾಣೆ ಆವರಣದಲ್ಲಿ ಹರಾಜು ಹಾಕಿದರು.

ಹರಾಜಿನಲ್ಲಿ ಭಾವಹಿಸುವವರು ತಮ್ಮ ಗುರುತಿನ ಚೀಟಿ, ಆಧಾರ ಕಾರ್ಡನ್ನು ಹರಾಜು ಪ್ರಕ್ರಿಯೆ ಮುಂಚಿತವಾಗಿ ನೀಡಬೇಕೆಂದು ,ದ್ವಿಚಕ್ರ ವಾಹನ ಮತ್ತು ಕಾರು ಹರಾಜಿನಲ್ಲಿ ಭಾಗವಹಿಸುವವರು ಐದು ಸಾವಿರ ಗಳು ಮತ್ತು ಲಾರಿ ಹರಾಜಿನಲ್ಲಿ ಭಾಗವಹಿಸುವವರು ಹತ್ತು ಸಾವಿರ ರೂಗಳನ್ನು ಕಟ್ಟಿ ಹರಾಜಿನಲ್ಲಿ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಡಿವೈಎಸ್ ಪಿ ಕೃಷ್ಣ ಮೂರ್ತಿ, ನಗರದ ಠಾಣೆ ಇನ್ಸ್ಪೆಕ್ಟರ್ ಹನುಮಂತಪ್ಪ ,ಗ್ರಾಮಾಂತರ ಇನ್ಸ್ಪೆಕ್ಟರ್ ಆನಂದ್ ಕುಮಾರ್ ಮತ್ತು ಪೊಲೀಸ್ ಸಿಬ್ಬಂದಿ ಹಾಗೂ ಸಾರ್ವಜನಿಕರು ಉಪಸ್ಥಿತಿಯಿದ್ದರು.

LEAVE A REPLY

Please enter your comment!
Please enter your name here