ಠಾಣೆಯ ಮುಂದೆ ಶವವಿಟ್ಟು ಪ್ರತಿಭಟನೆ..

0
504

ತುಮಕೂರು/ಪಾವಗಡ: ಆಸ್ತಿಯ ವಿಚಾರದಲ್ಲಿ ಜಗಳವುಂಟಾಗಿ ಮೋದಲನೆ ಪತ್ನಿ ಸರೋಜಮ್ಮ ಹಾಗೂ ಮಗ ಸೋಸೆಯಿಂದ ಹಲ್ಲೆಗೋಳಗಾಗಿ ಗಂಬೀರ ಗಾಯಗೊಂಡ ರಾಮಾಂಜಿನಪ್ಪ(75) ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದರು ಯಾವುದೇ ರೀತಿಯ ಚೇತರಿಕೆ ಕಾಣದೆ ನಿನ್ನೆ ರಾತ್ರಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸಾವು ..

ಮೇ ತಿಂಗಳ 29 ನೇ ತಾರೀಕು ಪಾವಗಡ ತಾಲ್ಲೂಕಿನ ಕಸಬಾ ಹೋಬಳಿಯ ಗಂಗವಾರ ಗ್ರಾಮದಲ್ಲಿ ಈ ಘಟನೆ ಸಂಭವಿಸಿದೆ ಮೃತ ರಾಮಾಂಜಿನಪ್ಪ ರವರ ಎರಡನೇ ಪತ್ನಿಯಾದ ಸಂಜೀವಮ್ಮ ಮಗಳಾದ ಪದ್ಮ ಪಾವಗಡ ಪಟ್ಟಣದ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲು ಒತ್ತಾಯಿಸಿದರು ಪಟ್ಟಣದ ಪೋಲಿಸರು ಈ ಘಟನೆಗೆ ಕಾರಣವಾದ ಮೋದಲನೆ ಹೆಂಡತಿ ಮಗ ಸೋಸೆಯನ್ನು ಇದುವರೆಗೂ ಬಂದಿಸದ ಕಾರಣ ನಿನ್ನೆ ಸಾವನ್ನಪ್ಪಿದ ರಾಮಾಂಜಿನಪ್ಪ ರವರ ಮೃತ ದೇಹವನ್ನು ಪಟ್ಟಣದ ಪೋಲಿಸ್ ಠಾಣೆಗೆ ತರುತ್ತಿರುವಾ ವೇಳೆ ಪಟ್ಟಣದ ಪೋಲಿಸರು ವೆಂಕಟಾಪುರ ರಸ್ತೆಯ ಹೌಸಿಂಗ್ ಬೋರ್ಡ್ ಸಮೀಪ ಶವದ ವಾಹನ ತಡೆದು ಅಡ್ಡಿ ಪಡಿಸಿದ ಕಾರಣ ಪೋಲಿಸ್ ಠಾಣೆಯ ಮುಂದೆ ರಸ್ತೆಯಲ್ಲಿ ಶವವಿಟ್ಟು ಆರೋಪಿಗಳನ್ನು ಕೋಡಲೇ ಬಂದಿಸಬೇಕೆಂದು ಮೃತರ ಎರಡನೆ ಪತ್ನಿಯ ಸಂಬಂದಿಕರು ಒತ್ತಾಯಿಸಿರುತ್ತಾರೆ..

LEAVE A REPLY

Please enter your comment!
Please enter your name here