ಡಾಂಬರು ಕಾರ್ಖಾನೆ ಸ್ಥಗಿತಗೊಳಿಸುವಂತೆ ಒತ್ತಾಯ

0
177

ಬಳ್ಳಾರಿ/ಸಂಡೂರು: ತಾಲೂಕಿನ ತೋರಣಗಲ್ ‌ಬಳಿ ನಿರ್ಮಾಣಗೊಂಡಿರುವ ಡಾಂಬರು ಕಾರ್ಖಾನೆ ಸ್ಥಗಿತಗೊಳಿಸಬೇಕು. ಜಿಂದಾಲ್ ಕಾರ್ಖಾನೆಯವರು ಅಕ್ರಮ ರಸ್ತೆ ನಿರ್ಮಾಣ ಮಾಡಿದ್ದು, ಅಕ್ರಮ ರಸ್ತೆ ನಿರ್ಮಾಣಕ್ಕಾಗಿ ಜಮೀನು ಕಳೆದುಕೊಂಡ ರೈತರಿಗೆ ಪರಿಹಾರ ನೀಡಬೇಕೆಂದು ಆಗ್ರಹಿಸಿ ಬಳ್ಳಾರಿಯಲ್ಲಿ ಇಂದು ಪ್ರತಿಭಟನಾ ಮೆರವಣಿಗೆ ನಡೆಸಿ ಡಿಸಿ ಕಚೇರಿಗೆ ಮುತ್ತಿಗೆ ಹಾಕಲಾಯಿತು.
ಪ್ರಜಾ ಪರಿವರ್ತನಾ ವೇದಿಕೆ ನೇತೃತ್ವದಲ್ಲಿ ನಡೆದ ಮುತ್ತಿಗೆ ಕಾರ್ಯಕ್ರಮದಲ್ಲಿ ಸಾವಿರಾರು ಜನ್ರು ಪಾಲ್ಗೊಂಡಿದ್ದು, ಈವೇಳೆ ಡಿಸಿ ಬರಬೇಕೆಂದು ಹೋರಾಟಗಾರರು ಒತ್ತಾಯ ಮಾಡಿದ್ರು. ಸಾವಿರಾರು ಜನ್ರು ಪಾಲ್ಗೊಂಡಿದ್ದ ಈ ಪ್ರತಿಭಟನೆಯಲ್ಲಿ ದಲಿತ, ಹಿಂದುಳಿದ, ಮುಸ್ಲಿಂ ಮತ್ತು ಕ್ರಿಶ್ಚಿಯನ್ ಸಮುದಾಯದ ಬಡ ಕುಟುಂಬಗಳಿಗೆ ನಿವೇಶನ ಮತ್ತುನೆ ಹಂಚಿಕೆ ಮಾಡಬೇಕು. ಬಗ್ಗೆ ಹುಕುಂ ಸಾಗುವಳಿ ಹಕ್ಕು ಪತ್ರಗಳನ್ನು ವಿತರಿಸಬೇಕೆಂದು ಒತ್ತಾಯ ಮಾಡಿದ್ರು.
ಈ ಸಂದರ್ಭದಲ್ಲಿ ಆರ್.ಪ್ರಕಾಶ್, ಆನಂದ್ ಕುಮಾರ್, ಉಮೇಶ್, ಶಿವಕುಮಾರ್ ನೇತೃತ್ವ ವಹಿಸಿದ್ದರು.
ಇಸಿಪಿಎಲ್ ಕಾರ್ಖಾನೆಯಿಂದ ಸುಮಾರು 40 ಹಳ್ಳಿಗಳ ಜನರಿಗೆ ತೊಂದರೆಯಾಗಲಿದೆ. ಮಹಿಳೆಯರಿಗೆ ಗರ್ಭಕೋಶದ ತೊಂದರೆಯಾಗಲಿದ್ದು, ಡಾಂಬರ ಕಾರ್ಖಾನೆಯ ಚಟುವಟಿಕೆಗಳನ್ನು ಸ್ಥಗಿತಗೊಳಿಸುವಂತೆ ಒತ್ತಾಯಿಸಿದ್ರು.

ಬೈಟ್: ಆನಂದ್ ಕುಮಾರ್, ಜಿಲ್ಲಾಧ್ಯಕ್ಷರು ಪ್ರಜಾ ಪರಿವರ್ತನಾ ವೇದಿಕೆ. ಬಳ್ಳಾರಿ.

LEAVE A REPLY

Please enter your comment!
Please enter your name here