ಡಾ.ರಾಜ್ ಕಲಾಮಂದಿರ ಉದ್ಘಾಟನೆ…

0
113

ಬೆಂಗಳೂರು ಗ್ರಾಮಾಂತರ/ದೊಡ್ಡಬಳ್ಳಾಪುರ: ನಗರದ ಹಳೇ ಬಸ್ ನಿಲ್ದಾಣದ ಬಳಿ ಡಾ|| ರಾಜ್‍ಕುಮಾರ್ ಕಲಾಮಂದಿರ ಮತ್ತು ಶ್ರೀ ಕೃಷ್ಣರಾಜೇಂದ್ರ ಮಾರುಕಟ್ಟೆಯ ಕಮಾನು ಉದ್ಘಾಟನೆ, ಹಾಗೂ ಶೇ.24.10, ಶೇ.7.25ರ ಮತ್ತು ಶೇ.3ರ ಅಡಿಯಲ್ಲಿ ಫಲಾನುಭವಿಗಳಿಗೆ ಹೊಲಿಗೆ ಯಂತ್ರಗಳ ಮತ್ತು ಅಂಗವಿಕಲರಿಗೆ ಟ್ರೈಸಿಕಲ್‍ಗಳ ವಿತರಣೆ ಕಾರ್ಯ ಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ ಮಾತನಾಡಿದ ನಗರಸಭಾ ಅಧ್ಯಕ್ಷ ತ.ನ.ಪ್ರಭುದೇವ್ ಮಾತನಾಡುತ್ತಾ ನಾಡು,ದೇಶಕಂಡ ಮಹಾನ್ ಕಲಾವಿದ ಪದ್ಮಭೂಷಣ ಡಾ.ರಾಜ್ ಕುಮಾರ್ ಕಲಾಭವನವನ್ನು ಈ ದಿನ ಉದ್ಘಾಟಿಸಲು ಸಂತಸ ತಂದಿದೆ. ಆರು ದಶಕಗಳ ಕಲಾಭವನವನ್ನು ಆಧುನಿಕವಾಗಿ‌ ನವೀಕರಿಸಲಾಗಿದ್ದು ಕಲಾಭವನವನ್ನು ಪುನಶ್ಚೇತನ ಗೊಳಿಸುವ ನಮ್ಮನಿಮ್ಮೆಲರ‌ಕನಸು ಈದಿನ ನನಸಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

ನಗರಸಭೆಯ ವತಿಂದ ವಿವಿಧ ಯೋಜನೆಗಳಿಗೆ ಆಯ್ಕೆಯಾದ ಸೂಕ್ತ ಫಲಾನುಭವಿಗಳಿಗೆ ಹೊಲಿಗೆ ಯಂತ್ರಗಳ ಮತ್ತು ಅಂಗವಿಕಲರಿಗೆ ಟ್ರೈಸಿಕಲ್‍ಗಳ ವಿತರಣೆ ಮಾಡಿದ ಶಾಸಕ ಟಿ.ವೆಂಕಟರಮಣಯ್ಯ ಮಾತನಾಡುತ್ತಾ ಕ್ಷೇತ್ರದ ಜನತೆ ಸರ್ಕಾರಿ ಯೋಜನೆಗಳನ್ನು ಸದುಪಯೋಗ ಪಡೆಸಿಕೊಂಡು ಉತ್ತಮ ಜೀವನ ರೂಪಿಸಿಕೊಳ್ಳುವಂತೆ ಸಲಹೆ ನೀಡಿದರು.ಮತ್ತೆ ತಮಗೆ ತಲುಪಿರುವ ಹೊಳಿಗೆಯಂತ್ರ ಮತ್ತು ವಾಹನಗಳ ಉಪಯುಕ್ತತೆ ಪಡೆದು ಅವುಗಳು ಜಾಗರೂಕತೆಯಿಂದ ಕಾಪಾಡಿ ಕೊಳ್ಳುವಂತೆ ಮನವಿ ಮಾಡಿದರು.

ಕಾರ್ಯಕ್ರಮ ವನ್ನು ನಗರಸಭಾ ಅಧ್ಯಕ್ಷ ತ.ನ. ಪ್ರಭುದೇವ ರವರ ಅಧ್ಯಕ್ಷತೆಯಲ್ಲಿ, ದೊಡ್ಡಬಳ್ಳಾಪುರ ಕ್ಷೇತ್ರದ ಶಾಸಕ ಟಿ. ವೆಂಕಟರಮಣಯ್ಯ ನಗರಸಭಾ ಉಪಾಧ್ಯಕ್ಷೆ ಸಿ.ಜಯಲಕ್ಷ್ಮಿ, ಸ್ಥಾಯಿ ಸಮಿತಿ ಅಧ್ಯಕ್ಷರು ಹೆಚ್.ಎಸ್. ಶಿವಶಂಕರ್ (ಶಂಕ್ರಿ) ಸೇರಿದಂತೆ ನಗರಸಭಾ ಸದಸ್ಯರು, ನಾಮನಿರ್ದೇಶಿತ ಸದಸ್ಯರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here