ಡಿಸಿ ಕಚೇರಿ ಮುಂದೆ ಪ್ರತಿಭಟನೆ

0
135

ಕೋಲಾರ :ವಿದ್ಯೆ ಎಂಬುದು ಈಗಿನ ಸಮಾಜದಲ್ಲಿ ವ್ಯಾಪಾರದ ವಸ್ತುವಾಗಿದ್ದು , ಹಣವಿವಿರುವವರು ಮಾತ್ರ ಖಾಸಗಿ ಶಾಲೆಗಳಲ್ಲಿ ಲಕ್ಷಾಂತರ ರೂಪಾಯಿ ಹಣಕಟ್ಟಿ ತಮ್ಮ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸುತ್ತಿದ್ದಾರೆ.
ಸರ್ವರಿಗೂ ಶಿಕ್ಷಣ ಸಿಗುವಂತಾಗಬೇಕು ಎಂಬ ಆಶಯದಿಂದ ಆರ್.ಟಿ.ಐ ಕಾಯ್ದೆಯಡಿಯಲ್ಲಿ ಎಲ್ಲರಿಗು ಅವಕಾಶ ನೀಡಬೇಕು ಆದರೆ ಶೇಖಡಾ ೬೦ರಷ್ಟು ಶಾಲೆಗಳಲ್ಲಿ ವಿನಾಕಾರಣ ಅರ್ಜಿಗಳನ್ನು ತಿರಸ್ಕರಿಸಿ,ಹಣಕಟ್ಟಿದರೆ ದಾಖಲಾತಿ ನೀಡುತ್ತಾರೆ. ಅರ್ಜಿದಾರರು ನ್ಯಾಯಕ್ಕಾಗಿ ಅಧಿಕಾರಿಗಳ ಬಳಿ ಹೋಗಿಬರುವ ವೇಳೆಗೆ ದಾಖಲಾತಿಗಳು ಮುಗಿದಿವೆ ಎಂಬ ಉತ್ತರಗಳು ನೀಡಿ ದಂದೆ ನಡೆಸುತ್ತಿದ್ದಾರೆ.

ಸರ್ಕಾರ ಎಲ್ಲ ಖಾಸಗಿ ಶಾಲೆಗಳಿಗೂ ಅನುಮತಿ ನೀಡುವ ಸಂದರ್ಭದಲ್ಲಿ ಅನೇಕ ಷರತ್ತುಗಳು ಹೇಳಿ,ಪ್ರತಿ ತರಗತಿಯ ವಿದ್ಯಾರ್ಥಿಯ ದಾಖಲಾತಿ ವಿವರಗಳು,ಶುಲ್ಕನಿಗದಿ ಇಂತಿಷ್ಟೇ ಇರಬೇಕು ಎಂಬ ಆದೇಶವಿದೆ.ಆದರೆ ಇದ್ಯಾವುದಕ್ಕೂ ದೃತಿಗೆಡದೆ ಬಡವರ ರಕ್ತ ಹೀರುವ ಜಂತುಗಳಾಗಿದ್ದಾರೆ ಎಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನಾ ಸಂಘಟನೆಯು ಕೊಲಾರ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಮಕ್ಕಳೊಂದಿಗೆ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಜಿಲ್ಲಾ ಶಾಸಕರಾದ ವರ್ತೂರು ಪ್ರಕಾಶ್,ಸಂಸದರಾದ ಕೆ.ಎಚ್.ಮುನಿಯಪ್ಪ ಸಹ ಹೋರಾಟಗಾರರ ಸಮಸ್ಯೆಗಳನ್ನು ಆಲಿಸಿ,ಕ್ರಮ ಜರುಗಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು. ರೈತಸಂಘದ ಜಿಲ್ಲಾಧ್ಯಕ್ಷರಾದ ನಳಿನಿ , ಶ್ರೀನಿವಾಸಗೌಡ,ಪೋಪಷಕರು ಮತ್ತು ಹಲವಾರು ಮಕ್ಕಳು ಹಾಜರಿದ್ದರು.

LEAVE A REPLY

Please enter your comment!
Please enter your name here