ಡೆಂಗ್ಯೂ,ಮಲೇರಿಯಾ ನಿಯಂತ್ರಣಕ್ಕಾಗಿ ಕ್ರಮ

0
218

ಬಳ್ಳಾರಿ /ಹೊಸಪೇಟೆ : ತಾಲೂಕಿನ ಕಮಲಾಪುರ ಪಟ್ಟಣದಲ್ಲಿ ಡೆಂಗ್ಯೂ ಮತ್ತು ಮಲೇರಿಯಾ ನಿಯಂತ್ರಣಕ್ಕಾಗಿ ಶೀಘ್ರವೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮುಖ್ಯಾಧಿಕಾರಿ ಫಣಿರಾಜ್ ಹೇಳಿದರು. ಸೋಮವಾರ ಪಟ್ಟಣ ಪಂಚಾಯತಿ ಕಛೇರಿಯಲ್ಲಿ ಸ್ಥಳೀಯ ಸುದ್ದಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಪಟ್ಟಣದ 20 ವಾರ್ಡ್‍ಗಳಲ್ಲಿ ಇಂದಿನಿಂದ ಫಾಗಿಂಗ್ ಮತ್ತು ಸ್ವಚ್ಚತೆ ಬಗ್ಗೆ ಅರಿವು ಮೂಡಿಸಲು ಪ್ರಯತ್ನ ನಡೆಸಲಾಗಿದೆ ಎಂದರು. ಒಟ್ಟು ನಾಲ್ಕು ಫಾಗಿಂಗ್ ಯಂತ್ರಗಳು ಪಂಚಾಯತಿಯ ಸುಭದ್ರಿಯಲ್ಲಿದ್ದು ಅವುಗಳನ್ನು ಸೈಕಲ್ ಅಥವ ಇತರ ವಾಹನಗಳಲ್ಲಿ ಅಳವಡಿಸಿಕೊಂಡು ಚರಂಡಿ, ಸ್ಲಂ ಏರಿಯಾ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಫಾಗಿಂಗ್ ಸಿಂಪರಣೆ ಮಾಡಿ ಸೊಳ್ಳೆಗಳನ್ನು ನಿಯಂತ್ರಿಸಲಾಗುತ್ತಿದೆ. ವಿವಿಧ ವಾರ್ಡ್‍ಗಳಲ್ಲಿ ನಿಂತ ನೀರಿನ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತಾ ಚರಂಡಿ, ನಿರುಪಯುಕ್ತ ಹೊಂಡಗಳಲ್ಲಿ ವೇಸ್ಟೇಜ್ ಆಯಿಲ್ ಮತ್ತು ಎಥೆನಾಲ್ ಪೌಡರ್‍ಗಳನ್ನು ಸಿಂಪರಣೆ ಮಾಡಲಾಗಿದೆ. ಈಗಾಗಲೇ ಪಟ್ಟಣದ ವಿವಿಧ ವಾರ್ಡ್‍ಗಳಲ್ಲಿ ಫಾಗಿಂಗ್ ಸಿಂಪರಣೆ ಕಾರ್ಯ ಪ್ರವೃತ್ತಿಯಲ್ಲಿದ್ದು ಜನರಿಗೆ ಡೆಂಗ್ಯೂ, ಮಲೇರಿಯಾದ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದರು. ಶೀಘ್ರದಲ್ಲೇ ಸ್ಥಳೀಯ ಸಂಘ ಸಂಸ್ಥೆಗಳೊಂದಿಗೆ ಸಹಕಾರದೊಂದಿಗೆ ಹೆಚ್ಚಿನ ಜಾಗೃತಿ ಸಮಾರಂಭಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಅವರು ಹೇಳಿದರು.

LEAVE A REPLY

Please enter your comment!
Please enter your name here