ಡೆಂಗ್ಯೂ ನಿಯಂತ್ರಣ ಕುರಿತ ಜಾಗೃತಿ ಜಾಥಾ

0
219

ಚಿಕ್ಕಬಳ್ಳಾಪುರ/ಗುಡಿಬಂಡೆ: ತಾಲೂಕು  ಆರೋಗ್ಯ ಇಲಾಖೆ ವತಿಯಿಂದ ರಾಷ್ಟ್ರೀಯ ಡೆಂಗ್ಯೂ ಜ್ವರ ವಿರೋಧಿದಿನಾಚರಣೆ ಅಂಗವಾಗಿ ಡೆಂಗ್ಯೂ ಜ್ವರದ ನಿಯಂತ್ರಣ ಕುರಿತ ಜಾಗೃತಿ ಜಾಥಾಹಮ್ಮಿಕೊಳ್ಳಲಾಗಿತ್ತು.

ಈ ವೇಳೆ ಡೆಂಗ್ಯೂ ಹಾಗೂ ಚಿಕನ್ ಗುನ್ಯ ರೋಗ ತಡೆಗಟ್ಟುವುದು ಹಾಗೂ ಸೊಳ್ಳೆ ಕಡಿತದಿಂದಸ್ವಯಂ ರಕ್ಷಿಸಿಕೊಳ್ಳುವ ಕುರಿತು ಜಾಗೃತಿ ಜಾಥಗೆ ತಾ.ಪಂ. ಉಪಾಧ್ಯಕ್ಷ ಬೈರಾರೆಡ್ಡಿ ಚಾಲನೆ ನೀಡಿಮಾತನಾಡಿದ ಅವರು ಮಾರಕ ಡೆಂಗ್ಯೂ ರೋಗ ನಿಯಂತ್ರಣಕ್ಕೆ ನಾಗರೀಕರು ಸಹಕರಿಸಬೇಕು,ತಮ್ಮ ಮನೆಗಳು, ಶಾಲೆ ಸೇರಿದಂತೆ ಸುತ್ತ ಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು,ಡೆಂಗ್ಯೂ ರೋಗ ತಡೆಗಟ್ಟಲು ಸ್ಥಳೀಯ ಸಂಸ್ಥೆಗಳೊಂದಿಗೆ ಸಾರ್ವಜನಿಕರು ಕೈ ಜೋಡಿಸಬೇಕುಎಂದರು.

ನಂತರ ಮಾತನಾಡಿದ ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ನರಸಿಂಹಮೂರ್ತಿರೋಗ ವಾಹಕ ಈಡಿಸ್ ಸೊಳ್ಳೆಗಳಿಂದ ಹರಡುವ ಡೆಂಗ್ಯೂ, ಚಿಕನ್‌ಗುನ್ಯ ರೋಗಗಳು ಮತ್ತುಅವುಗಳ ನಿಯಂತ್ರಣ ಕಾರ್ಯಗಳ ಬಗ್ಗೆ ಸಾರ್ವಜನಿಕರು ಮತ್ತು ಸಮುದಾಯದಲ್ಲಿ ಜಾಗೃತಿಮೂಡಿಸುವ ಸಲುವಾಗಿ ಈ ಜಾಗೃತಿ ಜಾಥ ಹಮ್ಮಿಕೊಳ್ಳಲಾಗಿದೆ. ಸೊಳ್ಳೆಗಳ ಸಂತಾನವೃದ್ಧಿಯಾಗುವ ಸ್ಥಳಗಳನ್ನು ನಿವಾರಿಸುವುದರ ಮೂಲಕ ಡೆಂಗ್ಯೂ ಚಿಕನ್‌ಗುನ್ಯ ಜ್ವರವನ್ನುತಡೆಗಟ್ಟಬಹುದು. ಡೆಂಗ್ಯೂ ಚಿಕನ್‌ಗುನ್ಯ ಜ್ವರ ಪಿಡುಗಿನಂತೆ ಹರಡುವ ಸಾಧ್ಯತೆಯಿದ್ದು, ಈ ಬಗ್ಗೆಎಚ್ಚರಿಕೆ ವಹಿಸಬೇಕು ಎಂದು ಹೇಳಿದರು.

ನಂತರ ತಾಲ್ಲೂಕು ವೈದ್ಯಾಧಿಕಾರಿ ಡಾ.ಮಹಿಮಾ ಮಾತನಾಡಿ ಡೆಂಗ್ಯೂ ಮತ್ತು ಚಿಕನ್‌ಗುನ್ಯಾಜ್ವರ ಈಡಿಸ್ ಜಾತಿಯ ಸೊಳ್ಳೆಯ ಕಚ್ಚುವಿಕೆಯಿಂದ ಹರಡುತ್ತದೆ. ಈ ಸೊಳ್ಳೆ ಹಗಲುಹೊತ್ತಿನಲ್ಲೇ ಕಚ್ಚುತ್ತದೆ.  ಯಾವುದೇ ಜ್ವರವಿರಲಿ ಶೀಘ್ರ ರಕ್ತ ಪರೀಕ್ಷೆ ಮಾಡಿಸಿ ಚಿಕಿತ್ಸೆ ಪಡೆಯಿರಿ.ಮನೆಯ ಒಳಗೆ ಮತ್ತು ಸುತ್ತಮುತ್ತ ನೀರು ನಿಲ್ಲದಂತೆ ಎಚ್ಚರವಹಿಸಿ ಸೊಳ್ಳೆ ಉತ್ಪತ್ತಿಯನ್ನುತಟೆಗಟ್ಟಿ. ನಿಂತ ನೀರು ಸೊಳ್ಳೆಯ ತವರು, ನೀರಿನ ಶೇಕರಣೆ ಸಲಕರಣೆಗಳನ್ನು ಭದ್ರವಾಗಿಮುಚ್ಚಿಡಿ. ಮಲಗುವಾಗ ಸೊಳ್ಳೆ ಪರದೆಯನ್ನು ಉಪಯೋಗಿಸಿ.  ಸಮಗ್ರ ಕೀಟನಿಯಂತ್ರಣದಲ್ಲಿ ಆರೋಗ್ಯ ಇಲಾಖೆಯೊಂದಿಗೆ ಸಹಕರಿಸಿ ಎಂದರು.

ಪಟ್ಟಣದ ಮುಖ್ಯ ರಸ್ತೆಯಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿ ಹಾಗೂ ಆಶಾಕಾರ್ಯಕರ್ತೆಯರು ಡೆಂಗ್ಯೂ ನಿಯಂತ್ರಣದ ಕುರಿತ ಕ್ರಮಗಳ ಕುರಿತು ಮಾಹಿತಿ ನೀಡುತ್ತಾಜಾಗೃತಿ ಜಾಥ ನಡೆಸಲಾಯಿತು. ಈ ವೇಳೆ ತಾ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ರಾಮಾಂಜಿ,ತಾಲ್ಲೂಕು ಕಾರ್ಯನಿರ್ವಹಣಾಧಿಕಾರಿ ರವಿಕುಮಾರ್, ಪ.ಪಂ. ಸದಸ್ಯ ರಿಯಾಜ್ ಪಾಷ,ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ವಿ.ನಾರಾಯಣಸ್ವಾಮಿ, ಮುಖಂಡ ಮೂರ್ತಿ,ಸಾರ್ವಜನಿಕ ಆಸ್ಪತ್ರೆಯ ಸಿಬ್ಬಂದಿಯಾದ ನರಸಿಂಹಯ್ಯ, ನಟರಾಜ್, ಮಂಜುನಾಥ್,ಗಂಗಾಧರ್ ಸೇರಿದಂತೆ ಹಲವರು ಇದ್ದರು.

LEAVE A REPLY

Please enter your comment!
Please enter your name here