ಡೆತ್ ನೋಟ್ ಬರೆದಿಟ್ಟು ರೈತ ಆತ್ಮಹತ್ಯೆ..

0
156

 

ಆಂಕರ್ : ಡೆತ್ ನೋಟ್ ಬರೆದಿಟ್ಟು ರೈತ ಆತ್ಮಹತ್ಯೆ ಮಾಡಿಕೊಂಡ ಘಟನೆ ಬಾಗಲಕೋಟೆ ಜಿಲ್ಲೆ ಮುಧೋಳ ತಾಲ್ಲೂಕಿನ ಮದಬಾವಿಯಲ್ಲಿ ನಡೆದಿದೆ. ಸಾಲಬಾದೆಯಿಂದ ಹೊಲದಲ್ಲಿರೋ ಗಿಡಕ್ಕೆ ನೇಣಿಗೆ ಶರಣಾದ
ಸಾದಶಿವ ಗೋವಿಂದಪ್ಪ ತಿಮ್ಮಾಪೂರ್ (೬೦) ಮೃತ ರೈತನಾಗಿದ್ದು.ವಿಜಯಾ ಬ್ಯಾಂಕ್ ನಲ್ಲಿ ೪ ಲಕ್ಷ ಸಾಲ ಗ್ರಾಮದ ಸೊಸೈಟಿಯಲ್ಲಿ ೧ ಲಕ್ಷ ಸಾಲ ಸೇರಿದಂತೆ ೨ ಲಕ್ಷ ಕೈಗಡ ಸಾಲ ಮಾಡಿದ್ದ ರೈತ ಸದಾಶಿವ.೪ ಎಕರೆ ಜಮೀನಿನಲ್ಲಿ ಕೊರೆಸಿದ್ದ ೨ ಬೋರ್ ವೆಲ್ ಗಳೂ ವಿಫಲವಾಗಿದ್ದು, ಸಾಲದಿಂದ ತಿವ್ರ ಚಿಂತಾಕ್ರಾಂತನಾಗಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಸ್ಥಳಕ್ಕೆ ಮುಧೋಳ ಪೊಲೀಸರು ಭೇಟಿ ಪರಿಶೀಲನೆ ನಡಿಸಿದ್ದು, ಮಹಾಲಿಂಗಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..

LEAVE A REPLY

Please enter your comment!
Please enter your name here