ತಂದೆಯನ್ನೇ ಹಿಗ್ಗಾಮುಗ್ಗ ಥಳಿಸಿದ ಪಾಪಿ ಮಕ್ಕಳು

0
302

ಬಾಗಲಕೋಟೆ/ಬದಾಮಿ:ಆಸ್ತಿ ಹಂಚಿಕೆ ಮಾಡಿಲ್ಲವೆಂದ ಮಾತ್ರಕ್ಕೆ, ಮಕ್ಕಳೇ ಹೆತ್ತ ತಂದೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಅಮಾನವೀಯ ಘಟನೆ ಬದಾಮಿ ತಾಲೂಕಿನ ನಿಂಗಾಪುರ ಗ್ರಾಮದಲ್ಲಿ ನಡೆದಿದೆ. ಶೇಕಪ್ಪ ಮನಗೂಳಿ ಎಂಬ ೮೦ ವರ್ಷದ ವೃದ್ಧ ವ್ಯಕ್ತಿಯೇ ಮಕ್ಕಳಿಂದ ಹಲ್ಲೆಗೊಳದ ತಂದೆ.
ವೃದ್ಧ ವ್ಯಕ್ತಿ ಶೇಕಪ್ಪ ೬ ಕೂರಗಿ ಜಮೀನನ್ನು ಹೊಂದಿದ್ದ, ಆದರೆ ಶೇಕಪ್ಪನ ಮಕ್ಕಳಾದ ಕನಕಪ್ಪ ಹಾಗೂ ಯಲ್ಲಪ್ಪ ನಮಗೆ ಆಸ್ತಿ ಪಾಲು ಮಾಡು ಎಂದು ಪೀಡಿಸುತ್ತಿದ್ರು. ಆದ್ರೆ ತಂದೆ ಶೇಕಪ್ಪ ಮಾತ್ರ ಮಕ್ಕಳ ಮಾತಿಗೆ ಒಪ್ಪಿರಲಿಲ್ಲ.‌ ತನ್ನ ಸಾವಿನವರೆಗೂ ಪಾಲು ಮಾಡುವುದು ಬೇಡ ಅನ್ನೋದು ತಂದೆಯ ಇಚ್ಚೆಯಾಗಿತ್ತು. ಇದ್ರಿಂದ ಆಕ್ರೋಶಗೊಂಡಿದ ಈತನ ಮಕ್ಕಳಾದ ಕನಕಪ್ಪ ಹಾಗೂ ಯಲಪ್ಪ ಇಬ್ಬರೂ ಸೇರಿ ತಂದೆ ಅನ್ನೋದನ್ನೂ ಮರೆತು, ಮನೆಯಲ್ಲಿಯೇ ಶೇಕಪ್ಪನಿಗೆ ಬಡಿಗೆ ಹಾಗೂ ಕಲ್ಲಿಂದ, ಕೈ ಮತ್ತು ಕಾಲುಗಳು ಸೇರಿದಂತೆ ಮನಬಂದಂತೆ ಹೊಡೆದು ಹಲ್ಲೆ ಮಾಡಿದ್ದಾರೆ.
ಸದ್ಯ ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿರುವ. ವೃದ್ಧ ಶೇಕಪ್ಪ ಬಾಗಲಕೋಟೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಹಲ್ಲೆಯಿಂದಾಗಿ ಗಂಭೀರ ಗಾಯಗೊಂಡ ಶೇಕಪ್ಪ, ತೀವ್ರ ನರಾಳಾಟ ನಡೆಸಿದ್ರೆ, ಇತ್ತ ಈ ಕುರಿತು ಗುಳೇದಗುಡ್ಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳಾದ ಕನಕಪ್ಪ ಹಾಗೂ ಯಲ್ಲಪ್ಪನನ್ನ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

LEAVE A REPLY

Please enter your comment!
Please enter your name here