ತಡವಾಗಿ ಬಂದ ಅಧಿಕಾರಿಗೆ ತರಾಟೆ….!

0
56

ಮಂಡ್ಯ/ಮಳವಳ್ಳಿ: ಶಾಸಕರ ಸಮ್ಮುಖದಲ್ಲೇ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಪಿಡಿಒ ರವರನ್ನು ತರಾಟೆಗೆ ತೆಗೆದುಕೊಂಡ ಘಟನೆ ಮಳವಳ್ಳಿ ತಾಲ್ಲೂಕಿನ ಕಲ್ಕುಣಿ ಗ್ರಾಮದಲ್ಲಿ ನಡೆಯಿತು.
ಗ್ರಾಮದ ಕೆರೆಯ ಭಾಗಿನ ಅರ್ಪಣೆ ಕಾರ್ಯಕ್ರಮಕ್ಕೆಆಗಮಿಸಿದ್ದ ಸಂದರ್ಭದಲ್ಲಿ ತಡವಾಗಿ ಆಗಮಿಸಿದ ಪಿಡಿಒ ಚೆಂದಲ್ ರವರನ್ನು ಗ್ರಾಮಪಂಚಾಯಿತಿ ಉಪಾಧ್ಯಕ್ಷ ಕುಮಾರ ರವರು ಶಾಸಕ ಕಾರ್ಯಕ್ರಮಕ್ಕೆ ಏಕೆ ತಡವಾಗಿ ಬಂದಿದ್ದೀರಿ ಎಂದಾಗ ನನಗೆ ಮಾಹಿತಿ ಗೊತ್ತಿಲ್ಲ ಎಂಬ ಅರಿಕೆ ಉತ್ತರ ನೀಡಿದ್ದ ಪಿಡಿಒಗೆ ಜನಪ್ರತಿನಿಧಿಗಳ ಬಗ್ಗೆ ತಾತ್ಸರವಾಗಿ ನೋಡುತ್ತಿರೀ. ಹಿಂದೆ ಇದ್ದ ಶಾಸಕರ ಕಾರ್ಯಕ್ರಮದಲ್ಲೂ ಇದೇ ರೀತಿ ಮಾಡಿದ್ದೀರಿ ಎಂದಾಗ ಶಾಸಕ ಅನ್ನದಾನಿ ರವರು ಸಹ ಉಪಾಧ್ಯಕ್ಷ ಕುಮಾರ ರವರ ಮಾತಿಗೆ ಕೈ ಜೋಡಿಸಿ ಪಿಡಿಒ ರವರಿಗೆ ಸ್ಥಳೀಯ ಜನಪ್ರತಿನಿದಿಗಳ. ಶಾಸಕರ ಸರ್ಕಾರಿ ಕಾರ್ಯಕ್ರಮಕ್ಕೆ ಮೂರನೇ ವ್ಯಕ್ತಿಯಿಂದ ಗೊತ್ತಾದರೂ ಬರಬೇಕು. ಇನ್ನೂ ಮುಂದೆ ಹೀಗೆ ಹಾಗದಂತೆ ನೋಡಿಕೊಳ್ಳಿ ಎಚ್ಚರಿಕೆ ನೀಡಿದರು. ಸಾರ್ವಜನಿಕರ ಎದುರು ಪಿಡಿಒಗೆ ಅಧಿಕಾರಿಗೆ ಗ್ರಾಮ ಪಂಚಾಯತಿ ಉಪಾಧ್ಯಕ್ಷ ತರಾಟೆ ತೆಗೆದುಕೊಂಡರು.

LEAVE A REPLY

Please enter your comment!
Please enter your name here