ತನ್ನ ವಿರುದ್ದದ ಸುದ್ದಿ ಪ್ರಸಾರವಾಗದಂತೆ “ಪವರ್ ಕಟ್” ಮಾಡಿಸಿದ ಶಾಸಕ

0
291

ಮಂಡ್ಯ/ಮಳವಳ್ಳಿ:ಶಾಸಕರ ವಿರುದ್ದದ ಮಾಧ್ಯಮದಲ್ಲಿ ಸುದ್ದಿ ಭಿತ್ತರವಾಗದಂತೆ ಮೊದಲ ದಿನ ವಿದ್ಯುತ್ ಕಡಿತ ಮಾಡಿದ್ದು. ಮರುದಿನವೂ ಕೇಬಲ್  ಪ್ರಸಾರವಾಗದಂತೆ ಗೂಂಡಾ ವತ೯ನೆಯನ್ನು ತೋರಿದ್ದಾರೆ ಎಂದು ಮಾಜಿ ಸಚಿವ ಹಾಗೂ ಬಿಜೆಪಿ ರಾಜ್ಯ ಹಿರಿಯ ಉಪಾಧ್ಯಕ್ಷ ಬಿ‌ .ಸೋಮಶೇಖರ್ ಆರೋಪಿಸಿದ್ದಾರೆ. ಮಳವಳ್ಳಿ ಪಟ್ಟಣದ ಬಿಜೆಪಿ ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಟಿ ನಡೆಸಿದ ಅವರು ತಾಲ್ಲೂಕಿಗೆ 10 ವಷ೯ದಲ್ಲಿ ಅಭಿವೃದ್ಧಿ ಹೆಸರನಲ್ಲಿ ಸಾಕಷ್ಟು ಹಣವನ್ನು ಕಮೀಷನ್ ಪಡೆದಿದ್ದಾರೆ ಎಂದು ಆರೋಪಿಸಿದರು. ಇವರ ಅವಧಿಯಲ್ಲಿ ಆಸ್ಪತ್ರೆಗೆ ಡಾಕ್ಟರ್ ಇಲ್ಲದೆ ಸಾವ೯ಜನಿಕರು ಪರದಾಡುತ್ತಿದ್ದಾರೆ. ಬಗರ್ ಹುಕುಂ ಸಾಗುವಳಿ ಹಂಚಿಕೆ ಸಂಬಂಧ ಇದುವರೆಗೂ ಯಾವುದೇ ಸಭೆ ನಡೆಸದೆ ಇರುವುದು ಬಡವರ ಮೇಲೆ ಎಷ್ಟು ಕಾಳಜಿ ಇದೆ ಎಂದು ತೋರಿಸುತ್ತದೆ. ಎಂದ ಅವರು ನಗರದಲ್ಲಿ ನಿವೇಶನ ಹಂಚುವ ವಿಚಾರ ಕೇವಲ ಗಿಮಿಕ್  ಅಷ್ಟೇ. ಲೋಕಾಯುಕ್ತ ಕೋಟ್೯ ನಲ್ಲಿರುವ. ನಿವೇಶನದ ಬಗ್ಗೆ ಸಾವ೯ಜನಿಕರಿಗೆ ತಿಳಿಸದೆ  ಚುನಾವಣೆ ದೃಷ್ಟಿಯಿಂದ ಗಿಮಿಕ್ ಮಾಡುತ್ತಿದ್ದಾರೆ ಎಂದರು. ಸುದ್ದಿ ಗೋಷ್ಠಿಯಲ್ಲಿ ಬಿಜೆಪಿ ಅಧ್ಯಕ್ಷ ಶಿವಸ್ವಾಮಿ. ಅಲ್ಪ ಸಂಖ್ಯಾಂತರ  ಜಿಲ್ಲಾಧ್ಯಕ್ಷ ಅಶ್ರಫ್. ಪ್ರಧಾನ ಕಾಯ೯ದಶಿ೯ ಪ್ರಸಾದ್. ಕುಮಾರ್ ಇದ್ದರು

LEAVE A REPLY

Please enter your comment!
Please enter your name here