ತಮ್ಮನ ಆತ್ಮಹತ್ಯೆ, ಅಣ್ಣನಿಗೆ ಹೃದಯಾಘಾತ

0
157

ಬೀದರ್/ಬಸವಕಲ್ಯಾಣ: ತಮ್ಮ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಸುದ್ದಿ ಕೇಳಿದ ಅಣ್ಣನು ಕೂಡ ಹೃದಯಾಪಘಾದಿಂದ ಮೃತಪಟ್ಟ ಘಟನೆ ನಗರದ ನಡೆದಿದೆ. ನಗರದ ಜೋಶಿ ಗಲ್ಲಿಯ ನಿವಾಸಿ ಪ್ರಕಾಶ ರೇಣುಕೆ (32) ಹಾಗೂ ಈತನ ಹಿರಿಯ ಸಹೋದರ ರಾಜು ರೇಣುಕೆ (37) ಮೃತ ಸಹೋದರರು. ನಗರದ ಶಾಂತಿನಿಕೇತನ ಶಾಲೆಯಲ್ಲಿ ಅತಿಥಿ ಶಿಕ್ಷಕನಾಗಿ ಸೇವೆಸಲ್ಲಿಸುತಿದ್ದ ಪ್ರಕಾಶ ಬೆಳಗ್ಗೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದ್ದು, ಇದನ್ನು ಗಮನಿಸಿದ ಮನೆಯವರು ಪ್ರಕಾಶನನ್ನು ಖಾಸಗಿ ಆಸ್ಪತ್ರೆ ತಂದು ದಾಖಲಿಸಿದ್ದು, ಆದರೆ ಅದಾಗಲೆ ಪ್ರಾಣ ಹೊಗಿತ್ತು ಎನ್ನಲಾಗಿದೆ. ಈ ಸುದ್ದಿ ತಿಳಿದು ಆಸ್ಪತ್ರೆಗೆ ಧಾವಿಸಿದ ಹಿರಿಯ ಸಹೋದರ ರಾಜು ಆಸ್ಪತ್ರೆ ಬಳಿಯೇ ಹೃದಯಾಪಘಾತಕ್ಕೆ ಒಳಗಾಗಿ ಮೃತಪಟ್ಟಿದ್ದಾನೆ.  ಸಹೋದರರ ಸಾವಿನಿಂದ ಇವರಿಬ್ಬರ ಪತ್ನಿಯರು ಸಹ ಆಘಾತಕ್ಕೆ ಒಳಗಾಗಿದ್ದು, ಇವರಿಬ್ಬರಿಗೂ ನಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆತ್ಮಹತ್ಯೆ ಮಾಡಿಕೊಂಡ ಪ್ರಕಾಶನ ಸಾವಿಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಈ ಕುರಿತು ಯಾವುದೆ ದೂರು ದಾಖಲಾಗಿಲ್ಲ.

LEAVE A REPLY

Please enter your comment!
Please enter your name here