ಸಂವಾದ ಕಾರ್ಯಕ್ರಮ..

0
162

ಬಳ್ಳಾರಿ /ಹೊಸಪೇಟೆ:ಹಿಂದೂತ್ವ ಹಾಗೂ ಗೋ ರಾಜಕಾರಣದಿಂದ ದೇಶದಲ್ಲಿ ಅಭದ್ರತೆ ಕಾಡುತ್ತಿದ್ದು, ಎಲ್ಲಾ ರಾಜಕೀಯ ಪಕ್ಷಗಳು, ಬಿನ್ನಾಭಿಪ್ರಾಯಗಳನ್ನು ಬದಿಗಿಟ್ಟು, ಒಗ್ಗೂಡಬೇಕಿದೆ. ಇಲ್ಲವಾದಲ್ಲಿ ದೇಶಕ್ಕೆ ಬಹುದೊಡ್ಡ ಕಂಠಕ ಎದುರಾಗಲಿದೆ ಎಂದು ಬೆಂಗಳೂರು ನಿಡುಮಾಮಿಡಿ ಸಂಸ್ಥಾನ ಮಠದ ವೀರಭದ್ರ ಚೆನ್ನಮಲ್ಲ ಸ್ವಾಮಿಜಿ ಹೇಳಿದರು.

70ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಆಹಾರದ ಹಕ್ಕು ವಿಷಯ ಕುರಿತು ಮಾತನಾಡಿದ ಶ್ರೀಗಳು, ವಿಶ್ವದಲ್ಲಿಯೇ ಅತಿ ಹೆಚ್ಚು ಗೋಮಾಂಸ ರಪ್ತು ಆಗುತ್ತಿರುವ ದೇಶಗಳಲ್ಲಿ ಭಾರತಕ್ಕೆ ಮೊದಲನೇ ಸ್ಥಾನದಲ್ಲಿದೆ. ಗೋಮಾಂಸ ಸೇವೆನೆ ಹಿಂದೂ ಧರ್ಮಕ್ಕೆ ವಿರೋಧ ಎಂಬ ಹಿಂದೂ ಧರ್ಮದ ಸಿದ್ಧಾಂತಕರು ಹಾಗೂ ಹಿಂಬಾಲಕರು, ಗೋಮಾಂಸ ರಪ್ತನ್ನು ಏಕೆ ತಡೆಯಬಾರದು ? ಎಂದು ಪ್ರಶ್ನಿಸಿದರು. ಗೋಮಾಂಸ ರಪ್ತು ಮಾಡುವ ದಂಧೆಯಲ್ಲಿ ಒಬ್ಬನೇ ಒಬ್ಬ ಮುಸ್ಲಿಂ, ಕ್ರಿಶ್ಚಿಯನ್ ಹಾಗೂ ದಲಿತನಾಗಲಿ ಇಲ್ಲ. ಶೇ.95ರಷ್ಟು ಮೇಲವರ್ಗದ ಜನರೇ ಗೋಮಾಂಸ ರಪ್ತುನಲ್ಲಿ ತೊಡಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು, ಪ್ರಮಾಣಿಕರಾದರೇ ಕೂಡಲೇ ಗೋಮಾಂಸ ರಪ್ತಾಗುದನ್ನು ತಡೆಯಲಿ ಎಂದು ಹೇಳಿದರು.
ಹಿಂದೂತ್ವದ ರಾಜಕೀಯ ಭಾಗವಾಗಿ ಗೋ ರಾಜಕಾರಣ ನಡೆಯುತ್ತಿದೆ. ಬಲವಂತವಾಗಿ ಹಿಂದೂತ್ವದ ರಾಜಕೀಯ ಭಾಗವಾಗಿ ಏಕಧರ್ಮ, ಏಕ ಸಂಸ್ಕೃತಿ . ಏಕ ಭಾಷೆಯನ್ನು ಈ ದೇಶದ ಮೇಲೆ ಹೇರಲು ಅಣಿಯಾಗಿರುವುದು ದೇಶದ ಬಹು ದೊಡ್ಡ ಕಂಠಕವಾಗಿದೆ. ಇದನ್ನು ವಿಫಲಗೊಳಿಸಲು ಎಲ್ಲಾ ರಾಜಕೀಯ ಪಕ್ಷಗಳು, ಒಗ್ಗೂಡಬೇಕು ಎಂದು ಕರೆ ನೀಡಿದರು.

ಮಾಜಿ ಶಾಸಕ ವಿಷಯ ಮಂಡಿಸಿ ಮಾತನಾಡಿದರು. ಡಿ.ಎಚ್.ಎಸ್.ಸಂಚಾಲಕ ಎಂ.ಜಂಬಯ್ಯ ನಾಯಕ ಅಧ್ಯಕ್ಷತೆ ವಹಿಸಿದ್ದರು. ಕಾರ್ಮಿಕ ಮುಖಂಡರಾದ ಯು.ಬಸವರಾಜ, ಗೋಪಾಲ ಕೃಷ್ಣ ಅರಳಿಹಳ್ಳಿ, ಜಿ.ತಿಪ್ಪಣ್ಣ, ಡಾ.ಮಲ್ಲಿಕಾರ್ಜುನ ಮಾನ್ಪಡೆ ವೇದಿಕೆ ಮೇಲೆ ಉಪಸ್ಥಿತರಿದ್ದರು. ಎ.ಕರುಣಾನಿಧಿ ನಿರೂಪಿಸಿದರು.ಕೆ.ರಮೇಶ ಸ್ವಾಗತಿಸಿದರು. ಎಸ್.ಸತ್ಯಮೂರ್ತಿ ವಂದಿಸಿದರು.

LEAVE A REPLY

Please enter your comment!
Please enter your name here