ತಹಶಿಲ್ದಾರ್ ವಿರುದ್ದ ಎಫ್ ಐ ಆರ್ ..!

0
382

ತುಮಕೂರು:ಹೈ ಕೋರ್ಟ ತಡೆಯಾಜ್ಷೆಯಿದ್ದರೂ ಭೂ ಪರಿವರ್ತನೆಯಾಗಿರುವ ಜಮೀನನ್ನು ಕಾನೂನು ಬಾಹಿರವಾಗಿ ಪರಭಾರೆ ಮಾಡಿಕೊಟ್ಟ ಆರೋಪದ ಅಡಿ ತುಮಕೂರು ತಹಸಿಲ್ದಾರ್ ರಂಗೇಗೌಡ ವಿರುದ್ದ ಎಫ್ ಐ ಆರ್ ದಾಖಲಾಗಿದೆ. ತಹಶಿಲ್ದಾರ್ ರಂಗೇಗೌಡ, ಕಸಬಾ ಕಂದಾಯ ನಿರೀಕ್ಷಕ ಮಹೇಶ್ ಸೇರಿದಂತೆ ೧೦ ಜನ ಕಂದಾಯ ಸಿಬ್ಬಂದಿ ವಿರುದ್ದ ನಗರ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ನಗರದ ಬಟವಾಡಿಯ ಸರ್ವೆ ನಂಬರ್ ೩೮ ರ ೬ ಎಕರೆ ೨೯ ಗುಂಟೆ ಭೂ ಪರಿವರ್ತನೆಯಾಗಿರುವ ಜಮೀನನ್ನು ಅಕ್ರಮಾಗಿ ಜಾಹೀದ್ ಮತ್ತು ಭಾಸ್ಕರ್ ಹೆಸರಿಗೆ ಖಾತೆ ಪಹಣಿ ಮಾಡಿಕೊಟ್ಟಿದ್ದಾರೆ. ಈ ಸಂಬಂಧ ಜಮೀನಿನ ಮೂಲ ವಾರಸುದಾರ ಮಹಮ್ಮದ್ ಅಲಿಂ ಜಿಲ್ಲಾ ಸತ್ರ ಹಾಗೂ ಪ್ರಧಾನ ಹಿರಿಯ ಶ್ರೇಣಿ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು. ದೂರು ಆಧರಿಸಿದ ನ್ಯಾಯಾಲಯವರು ತಹಶಿಲ್ದಾರ್ ರಂಗೇಗೌಡ, ರೆವ್ಯೂನ್ಯೂ ಇನ್ಸಪೆಕ್ಟರ್ ಮಹೇಶ್, ಸಿರೆಸ್ತೆದಾರ ಭಾನು ಪ್ರಕಾಶ್ ಸೇರಿದಂತೆ ೧೦ ಜನರ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಪೊಲೀಸ್ ರಿಗೆ ನಿರ್ದೇಶನ ನೀಡಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ತಹಶಿಲ್ದಾರ್ ರಂಗೇಗೌಡ ಈ ಪ್ರಕರಣಕ್ಕೂ ತಮಗೂ ಸಂಬಂಧ ಇಲ್ಲ. ಸಿವಿಲ್ ಕೋರ್ಟಲ್ಲಿ ತೀರ್ಮಾನವಾದ ನಂತರ ಖಾತೆ ಮಾಡಲಾಗಿದೆ ಎಂದು ನುಣುಚಿಕೊಂಡಿದ್ದಾರೆ. ಅಲ್ಲದೆ ಕೇಸ್ ಹಾಕಿದವರ ವಿರುದ್ದ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here