ತಹಶೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ..

0
149

ತುಮಕೂರು/ಪಾವಗಡ:ಆಶಾಕಾರ್ಯಕರ್ತೆಯರ ವಿವಿದ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪಟ್ಟಣದ ತಹಶೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿ ಮನವಿ ಪತ್ರ ಸಲ್ಲಿಸಿದರು.

ಪಟ್ಟಣದ ಬಳ್ಳಾರಿಯ ರಸ್ತೆಯಲ್ಲಿ ಜಾಥಾ ರಸ್ತೆ ತಡೆ ಮಾಡಿ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿ ಕೇಂದ್ಮತ್ತು ರಾಜ್ಯ ಸರ್ಕಾರಗಳು ಆಶಾಕಾರ್ಯಕರ್ತೆಯರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ತಹಶೀಲ್ದಾರ್ ತಿಪ್ಪೂರಾವ್ ರವರಿಗೆ ಮನವಿ ಪತ್ರ ಸಲ್ಲಿಸಿದರು. ಮನವಿ ಪತ್ರ ಸಲ್ಲಿಸಿ ಮಾತನಾಡಿಡ ಜಿಲ್ಲಾ ಜಿಲ್ಲಾ ಘಟಕದ ಕಲ್ಯಾಣಿ ಮಾತನಾಡಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸೂಚಿಸಿರುವಂತೆ ಕನಿಷ್ಟ ವೇತನ ಹದಿನೆಂಟು ರೂಪಾಯಿಗಳಿದೆ ನಾವು ಅಷ್ಟೇ ನೀಡಿ ಎಂದು ಕೇಳುತ್ತಿಲ್ಲ ಕನಿಷ್ಟ ಹದಿನೈದು ಸಾವಿರ ರೂಪಾಯಿಗಳಾದರು ವೇತನ ನೀಡಬೇಕೆಂದು ಒತ್ತಾಯಿಸಿದರು.ಈ ಸಂದರ್ಭದಲ್ಲಿ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಪದಾದಿಕಾರಿಗಳಾದ ಶ್ರೀರಂಗಮ್ಮ ಪುಟ್ಟಮ್ಮ ಶಾಂತಮ್ಮ ಗಂಗಮ್ಮ ವಿಜಯಮ್ಮ ಮೀನಾಕ್ಷಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here