ತಾಲೂಕು ಕಚೇರಿಗೆ ಮುತ್ತಿಗೆ,ಹಲವು ಬೇಡಿಕೆಗಳಿಗೆ ಒತ್ತಾಯ.

0
82

ಬೆಂಗಳೂರು ಗ್ರಾಮಾಂತರ/ದೊಡ್ಡಬಳ್ಳಾಪುರ: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ದೊಡ್ಡಬಳ್ಳಾಪುರ ತಾಲ್ಲೂಕು ಘಟಕದ ಕಾರ್ಯಕರ್ತರಿಂದ ತಾಲೂಕು ಕಚೇರಿ ಗೆ ಮುತ್ತಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಕೃಷಿ ಉತ್ಪನ್ನ ಗಳಿಗೆ ಬೆಂಬಲ ಬೆಲೆ ಘೋಷಣೆ ಮಾಡಿ ಖರೀದಿ ಕೇಂದ್ರಗಳನ್ನು ತೆಗೆಯುವಂತೆ ಒತ್ತಾಯಿಸಿ ಪ್ರತಿಭಟಿಸಿದ ಕಾರ್ಯಕರ್ತರು ತೀರದ ಸಂಕಷ್ಟದಲ್ಲಿರುವ ರೈತರಿಗೆ ನೆರವಾಗುವಂತೆ ಜೋಳ ಮತ್ತು ರಾಗಿ ಖರೀದಿ ಕೇಂದ್ರ ಗಳನ್ನು ತೆರೆಯ ಬೇಕು,ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿನ ರೈತ ಸಾಲ ಮನ್ನಾಮಾಡಬೇಕು,ಸಾಲ ಮಾಡಿರುವ ರೈತರ‌ ಮೇಲೆ ಯಾವುದೇ ನೋಟೀಸು ನೀಡುವುದು, ಕೇಸು ದಾಖಲಿಸುವುದನ್ನು ರದ್ದು ಗೊಳಿಸಬೇಕು,ರೈತನಿಗೆ ಲೀಟರ್ ಹಾಲಿಗೆ ಹತ್ತು ರೂಪಾಯಿ ಪ್ರೋತ್ಸಾಹ ದನ ನೀಡ ಬೇಕು,ರೈತರ ಪಂಪ್ ಸೆಟ್ಟುಗಳಿಗೆ ಹಗಲಿನಲ್ಲಿ ನಿರಂತರ ಎಂಟುಗಂಟೆ ವಿದ್ಯುತ್ ನೀಡಬೇಕು ಮತ್ತುರೈತರ ಮನೆಗಳಿಗೆ ಉಚಿತ ವಿದ್ಯುತ್ ನೀಡುವಂತೆ ಹಕ್ಕೊತ್ತಾಯಗಳನ್ನು ಮಂಡಿಸಿದ್ದಾರೆ.

ಪ್ರತಿಭಟನೆ ಯಲ್ಲಿ ತಾಲ್ಲೂಕು ಅಧ್ಯಕ್ಷ ನಾಗಸಂದ್ರ ಪ್ರಸನ್ನ,ಕಾರ್ಯದರ್ಶಿ ಮಹೇಶ್,ರೈತ ಮಹಿಳೆ ಉಮಾದೇವಿ ಸೇರಿದಂತೆ ತಾಲೂಕಿನ ಅನೇಕ ರೈತರು ಭಾಗವಹಿಸಿದ್ದರು.

ಬೈಟ್: ರೈತ ಮಹಿಳೆ ಉಮಾದೇವಿ

LEAVE A REPLY

Please enter your comment!
Please enter your name here