ತಾಲ್ಲೂಕು ಕಚೇರಿಗೆ ಮುತ್ತಿಗೆ, ಪ್ರತಿಭಟನೆ

0
101

ಮಂಡ್ಯ/ಮಳವಳ್ಳಿ: ಪಡಿತರ ಅನ್ನಭಾಗ್ಯ ಯೋಜನೆ ಯಡಿಯಲ್ಲಿ ನೀಡುತ್ತಿರುವ 7 kg ಅಕ್ಕಿ ಯಲ್ಲಿ 2kg ಕಡಿತ ಮಾಡಿ 5 kg ನೀಡಲು ಹೊರಟಿರುವುದನ್ನು ಖಂಡಿಸಿ ಕರ್ನಾಟಕ ಪ್ರಾಂತ ಕೃಷಿಕೂಲಿಕಾರರ ಸಂಘ ವತಿಯಿಂದ ತಾಲ್ಲೂಕು ಕಚೇರಿಗೆ ಮುತ್ತಿಗೆ ಪ್ರತಿಭಟನೆ ನಡೆಸಿದರು. ಕೂಲಿಕಾರರ ಸಂಘದ ಜಿಲ್ಲಾಧ್ಯಕ್ಷ. ಪುಟ್ಟುಮಾದು ನೇತೃತ್ವದಲ್ಲಿ ಸಂಘದ ಕಚೇರಿಯಿಂದ ಹೊರಟ ಪ್ರತಿಭಟನಾಕಾರ ರಾಜ್ಯ ಸರ್ಕಾರದವಿರುದ್ದ ಘೋಷಣೆ ಕೂಗುತ್ತಾ ತಾಲ್ಲೂಕು ಕಚೇರಿ ಮುಂದೆ ಧರಣಿ ನಡೆಸಿದರು.ಇದೇ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಪುಟ್ಟಮಾದುಮಾತನಾಡಿ, ಹಿಂದಿನಂತೆ 7kg ಅಕ್ಕಿ,1kg ಬೇಳೆ ಮುಂದುವರಿಸಬೇಕು. ಹಾಗೂ ಉಪ್ಪು,ಸಕ್ಕರೆ,ಎಣ್ಣೆ ಇತರ ಪದಾರ್ಥಗಳನ್ನು ರಿಯಾಯಿತಿ ದರದಲ್ಲಿ ವಿತರಿಸ ಬೇಕು.ರೇಷನ್ ಪಡೆಯಲು ಪ್ರತಿ ತಿಂಗಳು ಹೆಬ್ಬೆಟ್ಟು ಪಡೆಯುವ ಪದ್ದತಿಯನ್ನು ಈ ಕೂಡಲೆ ನಿಲ್ಲಿಸಬೇಕು.ಕೂಲಿಕಾರರ ಬಡವರು ಸಾಲಕ್ಕಾಗಿ ಸ್ವಯಂ ಸೇವಾ ಸಂಘ ಗಳಿಂದ ಶೇ 24 ರಿಂದ 36ರ ಬಡ್ಡಿಗೆ ಬಲಿಯಾಗಿ ಸಾಲದ ಕೂಪದಲ್ಲಿ ಚೇತರಿಸಿಕೊಳ್ಳದೆ ಮುಳುಗಿದ್ದಾರೆ ಅದ್ದರಿಂದ ಆರ್ ಬಿಐ ನಿರ್ದೇಶನದಲ್ಲಿ ಸರ್ಕಾರದ ಮಾರ್ಗದರ್ಶಿದಲ್ಲಿ ಎಲ್ಲಾ ವಾಣಿಜ್ಯ ಬ್ಯಾಂಕುಗಳಿಂದ ಉಪಕಸುಬು ನಡೆಸಲು ಆರ್ಥಿಕವಾಗಿ ಸದೃಡಗೊಳಿಸಲುಸಾಲ ವಿತರಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ತಾಲ್ಲೂಕು ಅಧ್ಯಕ್ಷ ಶಿವ ಮಲ್ಲಯ್ಯ,ಶಿವಕುಮಾರ್,ಆನಂದ್, ಹನುಮೇಗೌಡ,ಮಹದೇವಮ್ಮ,ಸೇರಿದಂತೆ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here