ತಾಲ್ಲೂಕು ಕಚೇರಿಗೆ ಮುತ್ತಿಗೆ, ಪ್ರತಿಭಟನೆ

0
43

ಮಂಡ್ಯ/ಮಳವಳ್ಳಿ: ವೃದ್ದರು, ಅಂಗವಿಕಲರು , ವಿಧವೆಯರು, ಸಂಧ್ಯಾ ಸುರಕ್ಷ ಮತ್ತು ಮಂಗಳಮುಖಿಯರ ಮಾಸಾಶನವನ್ನು ಸ್ಥಳದಲ್ಲೇ ನೀಡುವಂತೆ ಒತ್ತಾಯಿಸಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ಮತ್ತು ಕರ್ನಾಟಕ ರಾಜ್ಯ ಅಂಗವಿಕಲರ ಮತ್ತು ಪಾಲಕರ ಒಕ್ಕೂಟವತಿಯಿಂದ ಮಳವಳ್ಳಿಪಟ್ಟಣದ ತಾಲ್ಲೂಕು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಯಿತು.
ಮಳವಳ್ಳಿಪಟ್ಟಣದ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದಿಂದ ಹೊರಟ ಪ್ರತಿಭಟನಾಕಾರರು ಸರ್ಕಾರದ ವಿರುದ್ದ ಘೋಷಣೆ ಕೂಗುತ್ತಾ ಪಟ್ಟಣದ ಪ್ರಮುಖ ಬೀದಿಗಳಲ್ಲಿ ನೂರಾರು ಪ್ರತಿಭಟನಾಕಾರರು ತಾಲ್ಲೂಕು ಕಚೇರಿಗೆ ಮುತ್ತಿಗೆ ಹಾಕಿದರು. ಜುಲೈ ತಿಂಗಳ ಬಜೆಟ್ನ ಘೋಷಣೆಯಂತೆ ಮಾಸಿಕ 1000 ಗಳಂತೆ ಇಂದಿನಿಂದಲೇ ಬಿಡುಗಡೆ ಮಾಡಬೇಕು, ನೂರಾರು ಜನರಿಗೆ ಮಾಸಾಶನದ ಆದೇಶದ ಪ್ರತಿ ನೀಡಿ ಒಂದು ವರ್ಷ ಕಳೆದಿದ್ದರೂ ಈ ವರೆಗೆ ಮಾಸಾಶನ ನೀಡಿರುವುದಿಲ್ಲ, ಆ ಎಲ್ಲಾ ಬಾಕಿಯನ್ನು ಒಳಗೊಂಡಂತೆ ಇನ್ನೂ ಒಂದು ವಾರದೊಳಗೆ ಪಾವತಿಮಾಡಬೇಕು, ಮಾಸಾಶನ ಮಂಜೂರು ಮಾಡಲು ಅನುಸರಿಸುತ್ತಿರುವ ನಿಯಮಗಳನ್ನು ಸರಳೀಕರಿಸಬೇಕು, ನೌಕರರು ಹಾಗೂ ಕಾರ್ಮಿಕರಿಗೆ ಪ್ರತಿವರ್ಷ ಸಂಬಳಕ್ಕೆ ಅನುಗುಣವಾಗಿ ಬೆಲೆಹೆಚ್ಚಳ ಪರಿಗಣಿಸಿ ತುಟ್ಟಿ ಭತ್ಯೆ ನೀಡುವಂತೆ ಈ ಸಮುದಾಯಕ್ಕೆ ನೀಡಬೇಕು, ವಿಜಯಬ್ಯಾಂಕ್ ಮತ್ತು ಅಂಚೆಕಚೇರಿಯಲ್ಲಿ ಮಾಸಾಶನ ತಲುಪಿಸಲು ವಿಳಂಬವಾಗುತ್ತಿರುವುದನ್ನು ತಪ್ಪಿಸಬೇಕು, ಮತ್ತು ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ಜರುಗಿಸಬೇಕು. ಶವಸಂಸ್ಕಾರ ಮಾಡಿ ವರ್ಷಗಳೇ ಕಳೆದಿದ್ದರೂ ಅವರವಶವಸಂಸ್ಕಾರದ ಸಹಾಯಧನ ಪಾವತಿಯಾಗಿಲ್ಲ ಆದರ ಲೋಪಗಳನ್ನು ಸರಿಪಡಿಸಿ ತಡಮಾಡದೆ ಹಣ ಬಿಡುಗಡೆ ಮಾಡಬೇಕು ಮತ್ತು ರಾಷ್ಟ್ರೀಯ ಭದ್ರತಾ ಯೋಜನೆಯ ಹಣವನ್ನು ತುರ್ತು ಬಿಡುಗಡೆ ಮಾಡಬೇಕು. ಅಂಗವಿಕಲರು ವೃದ್ದರು ವಿಧವೆಯರು ಮಂಗಳಮುಖಿಯರ ಸಮಸ್ಯೆ ಯನ್ನು ಹೋಗಲಾಡಿಸಲು ಪ್ರತಿ ಗ್ರಾಮದಲ್ಲೂ ಅದಾಲತ್ ನಡೆಸಬೇಕು ಪ್ರತಿ ತಿಂಗಳಿಗೊಮ್ಮೆ ತಹಸೀಲ್ದಾರ್ ಅಧ್ಯಕ್ಷತೆ ಯಲ್ಲಿ ಕುಂದುಕೊರೆತೆಯ ಸಭೆ ನಡೆಸಬೇಕು ಎಂಬ ಬೇಡಿಕೆಗಳ ಮನವಿಯನ್ನು ತಹಸೀಲ್ದಾರ್ ಚಂದ್ರಮೌಳಿ ರವರಿಗೆ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಕೂಲಿಕಾರರ ಸಂಘದ ಜಿಲ್ಲಾಧ್ಯಕ್ಷ ಪುಟ್ಟಮಾಧು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹನುಮೇಶ್, ತಾಲ್ಲೂಕು ಅಧ್ಯಕ್ಷ ಶಿವಮಲ್ಲಯ್ಯ, ಕಾರ್ಯದರ್ಶಿ ಸರೋಜಮ್ಮ, ಶಿವಕುಮಾರ್, ಬಸವಣ್ಣ, ಜಯಶೇಖರಮೂರ್ತಿ, ಚಿಕ್ಕಮರೀಗೌಡ ಸೇರಿದಂತೆ ಮತ್ತಿತ್ತರರು ಇದ್ದರು

LEAVE A REPLY

Please enter your comment!
Please enter your name here