ತಾಲ್ಲೂಕು ಪಂಚಾಯತಿಗೆ ಮುತ್ತಿಗೆ ಹಾಕಿ ಪ್ರತಿಭಟನೆ‌.

0
855

ಚಿಕ್ಕಬಳ್ಳಾಪುರ/ಚಿಂತಾಮಣಿ:-ನಗರದ ತಾಲ್ಲೂಕು ಪಂಚಾಯತಿಗೆ ಶೆಟ್ಟಿ ಹಳ್ಳಿ ಗ್ರಾಮಸ್ಥರು ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಿದರು.

ಶೆಟ್ಟಿ ಹಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯು ಏಕ ನಿರ್ಧಾರಗಳನ್ನು ತೋರುತ್ತಿದ್ದು ಹಾಗೂ ಅವ್ಯವಹಾರ ಮಾಡುತ್ತಿರುವ ಪಿ ಡಿ ಒ ಅವರಿಗೆ ವರ್ಗಾವಣೆ ಮಾಡುವಂತೆ ಒತ್ತಾಯಿಸಿ ಪ್ರತಿಭಟನೆ ಮಾಡಿದರು.

ಶೆಟ್ಟಿ ಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಸೇರಿದ ಎಲ್ಲಾ ಊರಿನ ಗ್ರಾಮಸ್ಥರಿಂದ ಪಿ.ಡಿ.ಒ ರವರು ಮಾಡುತ್ತಿರುವ ಅವ್ಯವಹಾರಗಳ ಬಗ್ಗೆ.
೧) 14ನೇ ಹಣಕಾಸಿನ ಯೋಜನೆಯಡಿ ನಡೆದಿರುವ ಅವ್ಯವಹಾರವನ್ನು ಸೂಕ್ತ ವಾಗಿ ತನಿಖೆ ಮಾಡಿಸಿ ತಪ್ಪಿಸ್ತರ ವಿರುದ್ಧ ಕ್ರಮ ಕೈಗೊಳ್ಳವುದರ ಬಗ್ಗೆ.
೨)ಹಲವು ವಸತಿ ಯೋಜನೆಗಳಲ್ಲಿ ಈ ಹಿಂದೆ ಪಡೆದಿರುವಂತಹ ಫಲಾನುಭವಿಗಳನ್ನು ಮತ್ತೆ ಅದೇ ಫಲಾನುಭವಿಗಳನ್ನು 2016-17 ರಲ್ಲಿ ಫಲಾನುಭವಿಗಳಾಗಿ ಆಯ್ಕೆ ಮಾಡಿರುತ್ತಾರೆ.
ಇಂತಹ ಹಲವಾರು ಫಲಾನುಭವಿಗಳನ್ನು 2 ಸಲ ಮನೆಗಳನ್ನು ಕೊಟ್ಟಿರುವುದರ ಬಗ್ಗೆ ಕಾರ್ಯನಿರ್ವಾಹನಾಧಿಕಾರಿಗಳಲ್ಲಿ ಸಹ ದೂರು ನೀಡಿದ್ದರು ಯಾವುದೇ ಕ್ರಮಕೈಗೊಂಡಿರುವುದಿಲ್ಲ. ಆದ ಕಾರಣ ವಸತಿ ಮನೆಗಳ ಬಗ್ಗೆ ಸೂಕ್ತ ತನಿಖೆ ಮಾಡಿ ಪಿ.ಡಿ.ಒ ರವರ ಮೇಲೆ ಕ್ರಮಕೈಗೊಳ್ಳಬೇಕಾಗಿ ಕೋರುತ್ತೇವೆ.
3) 2002 ರಲ್ಲಿ ನೀಲಮ್ಮಕೇಶವರೆಡ್ಡಿ ರವರಿಗೆ ಮನೆ ಮಂಜೂರುರಾಗಿದ್ದು 1ನೇ ಹಂತದ ಬಿಲ್ಲು ಸಂದಾಯವಾಗಿದ್ದು ಮುಂದಿನ ಹಂತಗಳ ಬಿಲ್ಲು ಮಾಡಿರುವುದಿಲ್ಲ ಮನೆ ಸಹ ಕಟ್ಟಿರುವುದಿಲ್ಲ ಆದ ಕಾರಣ 1ನೇ ಹಂತ ಬಿಲ್ಲು ಮೊತ್ತವನ್ನು ವಸತಿ ನಿಗಮಕ್ಕೆ ವಾಪಸ್ಸು ಮಾಡಿರುತ್ತೇವೆ. ಈ ವ್ಯಕ್ತಿಗೆ ಮತ್ತೆ ಮನೆ ಮೀನುಗಾರಿಕೆ ವತಿಯಿಂದ ಮಂಜೂರು ಹಾಗಿದ್ದು, ಇವರಿಗೆ ಬೇಕಾದಾಂತಹ ಪಂಚಾಯತಿ ಯಿಂದ ದಾಖಲೆಗಳನ್ನು ನೀಡಲು 3-4 ತಿಂಗಳಗಳಿಂದ ಸತಾಯಿಸಿರುತ್ತಾರೆ ಆದ ಕಾರಣ ಕೂಡಲೆ ತನಿಖೆ ಮಾಡಿ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.

ವರದಿ :-ಇಮ್ರಾನ್ ಖಾನ್ ಅರ್ ಕೆ

LEAVE A REPLY

Please enter your comment!
Please enter your name here