ತಾಲ್ಲೂಕು ರೈತ ಸಮ್ಮೇಳನ

0
144

ಮಂಡ್ಯ/ಮಳವಳ್ಳಿ: ರೈತರು ಸಂಘಟನೆಯಾದರೆ ಮಾತ್ರ ರೈತರ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಸಾದ್ಯ ಎಂದು ಕನಾ೯ಟಕ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಜಿ.ಸಿ ಬಯ್ಯಾರೆಡ್ಡಿ ತಿಳಿಸಿದರು.

ಮಳವಳ್ಳಿ ಪಟ್ಟಣದ ಗಂಗಾಪರಮೇಶ್ವರಿ ಕಲ್ಯಾಣ ಮಂಟಪ ದಲ್ಲಿ ನಡೆದ ತಾಲ್ಲೂಕು ರೈತರ 3 ನೇ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿ, ಶಾಸಕರು ತಮ್ಮ ಸಂಬಳವನ್ನು ಹೆಚ್ಚಿಸಿಕೊಳ್ಳಲು ಪಕ್ಷಬೇದ ಮರೆತು ವಿದಾನಸಭೆಯಲ್ಲಿ ಒಕ್ಕೊರಲಿನಿಂದ ಮನವಿ ಮಾಡಿದ ಪರಿಣಾಮ ಅರ್ದಗಂಟೆಯಲ್ಲಿ ಸಂಬಳ ಹೆಚ್ಚಾಯಿತು ಅದೇ ರೀತಿ ರೈತರು ಎಲ್ಲರೂ ಸಂಘಟಿತರಾದರೆ ನಿಮ್ಮ ಬೇಡಿಕೆಗಳು ಈಡೇರುತ್ತವೆ ಎಂದರು. ಕಾಯ೯ಕ್ರಮ ದ ಅಧ್ಯಕ್ಷತೆಯನ್ನು ಎಂ ಲಿಂಗರಾಜು ವಹಿಸಿದ್ದರು. ಜಿಲ್ಲಾ ಮುಖಂಡ ಎನ್.ಎಲ್ ಭರತ್ ರಾಜ್, ಬಿ.ಯಶವಂತ, ಶಿವಮಲ್ಲಯ್ಯ, ಜನವಾದಿ ಮಹಿಳಾ ಸಂಘಟನೆ ಯ ಸುನೀತ, ಟಿ.ಹೆಚ್ ಆನಂದ್, ಟಿ.ಎಲ್ ಕೃಷ್ಣೇಗೌಡ. ಲಿಂಗರಾಜಮೂರ್ತಿ, ಜವರಯ್ಯ ಸೇರಿದಂತೆ ಮತ್ತಿತ್ತರರು ಇದ್ದರು.

LEAVE A REPLY

Please enter your comment!
Please enter your name here