ತಿಥಿ ಬಿಡಿ ಸಸಿ ನೆಡಿ ಕಾರ್ಯಕ್ರಮ…

0
236

ಚಿಕ್ಕಬಳ್ಳಾಪುರ/ಶಿಡ್ಲಘಟ್ಟ:ತಿಥಿ ಬಿಡಿ ಸಸಿ ನೆಡಿ ದಿವಂಗತ ಕೆ.ಎಸ್ ಪುಟ್ಟಣ್ಣಯ್ಯ ಸ್ಮರಣಾರ್ಥ ಕಾರ್ಯಕ್ರಮ ಹಾಗೂ ರೈತರ ಜ್ವಲಂತ ಸಮಸ್ಯೆಗಳ ಪರಿಹಾರಕ್ಕಾಗಿ ಪ್ರತಿಭಟಿಸಿ ಚಿಕ್ಕಬಳ್ಳಾಪುರ ಮುಖ್ಯ ರಸ್ತೆಯ ಬಳಿಯಿರುವ ರೇಷ್ಮೆ ಇಲಾಖೆ ಆವರಣದಲ್ಲಿ ಸಸಿಗಳನ್ನು ನೆಟ್ಟು ಮೆರವಣಿಗೆ ಮೂಲಕ ಟಿಬಿ ಮುಖ್ಯ ರಸ್ತೆಯಲ್ಲಿ ಸಾಗಿ ತಾಲ್ಲೂಕು ಕಛೇರಿಗೆ ಮುತ್ತಿಗೆ ಹಾಕಿ ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆ (ಪುಟ್ಟಣ್ಣಯ್ಯ ಬಣ) ಸಂಘಟನೆಯಿಂದ ಪ್ರತಿಭಸಿದರು.

ರೈತರ ಸಮಸ್ಯಗಳನ್ನು ಬಗೆಹರಿಸುವುದರಲ್ಲಿ ತಾಲ್ಲೂಕಿನ ಅಧಿಕಾರಿಗಳು ವಿಫಲರಾಗಿದ್ದು ರಾಜಕೀಯ ಮುಖಂಡ ಒತ್ತಡಗಳಲ್ಲಿ ಸಿಲುಕಿ ರೈತರ ಸಮಸ್ಯಗಳು ಬಗೆ ಹರಿಸುವುದರಲ್ಲಿ ಅಧಿಕಾರಿಗಳು ತಾರತಮ್ಮ ಮಾಡುತ್ತಿರುವುದು ಖಂಡನೀಯ ಎಂದು ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆ (ಪುಟ್ಟಣ್ಣಯ್ಯ ಬಣ) ಜಿಲ್ಲಾಧ್ಯಕ್ಷ ಲಕ್ಷ್ಮಿನಾರಾಯಣರೆಡ್ಡಿ ಮಾತನಾಡಿದರು.
ಪ್ರತಿಭಟನೆಯಲ್ಲಿ ತಾಲ್ಲೂಕು ಜಿಲ್ಲಾ ಉಪಾದ್ಯಕ್ಷರಾದ ಮುನಿಕೆಂಪಣ್ಣ, ಉಸೇನ್ ಸಾಬ್, ವೆಂಕಟಸ್ವಾಮಿ, ತಾಲ್ಲೂಕು ಅದ್ಯಕ್ಷ ರವಿಪ್ರಕಾಶ್, ಕಾರ್ಯದರ್ಶಿ ಭಕ್ತರಹಳ್ಳಿ ಪ್ರತೀಶ್ ಹಾಗೂ ಹಲವಾರು ರೈತರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಉಪ ತಹಶೀಲ್ದಾರ್ ಮುನಿಕೃಷ್ಣಪ್ಪ ರವರಿಗೆ ಮನವಿ ಪತ್ರವನ್ನು ನೀಡಿದರು.

LEAVE A REPLY

Please enter your comment!
Please enter your name here